ಯಾದಗಿರಿ : ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಯವರು ನವೆಂಬರ್ ೧೧ರಂದು ಯಾದಗಿರಿ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಗರದ ಡಿಗ್ರಿ ಕಾಲೇಜು ಆವರಣದಲ್ಲಿರುವ ಸಭಾ ಭವನದಲ್ಲಿ ನವೆಂಬರ್ ೧೧ರಂದು ಸಂಜೆ ೪ ಗಂಟೆಗೆ ನಡೆಯಲಿರುವ ಸಂಘದ ಸಂಘಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದು, ಯಾದಗಿರಿ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರು ಭಾಗವಹಿಸಿ ಸಭೆಯನ್ನ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ. ಜಿಲ್ಲಾಧ್ಯಕ್ಷರಾದ ರಾಯಪ್ಪಗೌಡ ಹುಡೇಡ್ ಜಿಲ್ಲಾರ್ಧಯಕ್ಷರು ಅಧ್ಯಕ್ಷತೆ, ವಿಭಾಗೀಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಹನಗಂಡಿ, ಖಜಾಂಚಿ ರಂಗನಾಥ ನಾಯಕ, ಕಾರ್ಯದರ್ಶಿ ಸಾಯಪ್ಪ ಚಂಡ್ರಿಕಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನ.11 ರಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಯಾದಗಿರಿ ಜಿಲ್ಲೆಗೆ ಭೇಟಿ


