ವಡಗೇರಾ: ಸತತವಾಗಿ ಸುರಿದ ಬಾರಿ ಮಳೆಯಿಂದ ತಾಲೂಕಿನ ಕೊನಹಳ್ಳಿ – ಕಂದಳ್ಳಿ ತುಮಕೂರು-ವಡಗೇರಾ ಮತ್ತು ಮಾಚನೂರ -ಬೆಂಡೆಬೆಂಬಳಿ ವಡಗೇರಾ- ಕುರುಕುಂದ-ನಾಯ್ಕಲ್ ಕುರುಕುಂದ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ..ಕೂಡಲೆ ಜಿಲ್ಲಾಡಳಿತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮೀಣ ಭಾಗದ ಹಲವು ಪ್ರಮುಖ ರಸ್ತೆಗಳು ಮಳೆಯಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ ವಹಿಸುತ್ತಿರುವುದು ಸರಿಯಲ್ಲ ಈ ರಸ್ತೆಗಳ ಮೂಲಕ ದಿನನಿತ್ಯ ಓಡಾಡುವ ಸಾರ್ವಜನಿಕರು ಅಧಿಕಾರಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಇಡಿ ಶಾಪ್ ಹಾಕುತ್ತಿದ್ದಾರೆ.ಈ ರಸ್ತೆಗಳಲ್ಲಿ ಸಂಚರಿಸುವಾಗ ಅತಿ ಹೆಚ್ಚಿನ ಅಪಘಾತಗಳಾಗಿ ಸಾವು ನೋವುಗಳಾದ ಉದಾಹರಣೆಗಳಿವೆ ತಾಲೂಕು ಕೇಂದ್ರದಿಂದ ಸೈದಾಪುರ ರಾಯಚೂರು, ಹಾಗೂ ವಡಗೇರಾದಿಂದ ಶಹಾಪುರ ಮತ್ತು ತೆಲಂಗಾಣ ಗಡಿ ಭಾಗದ ಇನ್ನಿತರ ಗ್ರಾಮಗಳಿಗೆ ತೆರಳಲು ವಾಹನ ಸವಾರರು ಹರ ಸಾಹಸ ಪರದಾಡುವಂತಾಗಿದೆ ವಾಹನ ಸವಾರರು ಈ ರಸ್ತೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ರಸ್ತೆಗಳು ಮಳೆಯಿಂದ ನೀರು ತುಂಬಿ ಕೆಸರುಗದ್ದೆಯಂತಾಗಿ ದೊಡ್ಡ ದೊಡ್ಡ ತಗ್ಗುಗಳು ಬಿದ್ದಿವೆ ಕೂಡಲೇ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ಮುಂದಾಗಬೇಕು ಒಂದು ವೇಳೆ ವಿಳಂಬ ಮಾಡಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಎಚ್ಚರಿಸಿದ್ದಾರೆ
ವಡಗೇರಾ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ:ಒತ್ತಾಯ


