ವಡಗೇರಾ: ತಾಲೂಕು ಕಚೇರಿಗಳು ರೈತರ ವಿವಿಧ ಬೇಡಿಕೆಗಳು ಈಡೇರಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಸೂಚನೆ ಮೇರೆಗೆ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕ ನೇತೃತ್ವದಲ್ಲಿ ಶುಕ್ರವಾರದಂದು ವಡಗೇರಾ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ರವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಅವರು ತಾಲೂಕು ಕೇಂದ್ರವಾಗಿ ಸುಮಾರು 8 ವರ್ಷಗಳು ಕಳೆಯುತ್ತಾ ಬರುತ್ತಿದೆ ಆದರೆ ಇಲ್ಲಿಯವರೆಗೂ ತಾಲೂಕಿಗೆ ಸಂಬಂಧಿಸಿದ ವಿವಿಧ ಕಚೇರಿಗಳು ಆರಂಭವಾಗಿಲ್ಲ ಕೂಡಲೆ ತಾಲೂಕಿಗೆ ಸಂಬಂಧಿಸಿದ ಪ್ರಮುಖ ಕಚೇರಿಗಳಾದ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ , ತಾಲೂಕಿನಲ್ಲಿ ಪದವಿ ಪೂರ್ವ ಪದವಿ ಮಹಾವಿದ್ಯಾಲಯ ವಸತಿ ನಿಲಯಗಳು ಉಪನೊಂದಣೆ ಕಚೇರಿ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ, ರೈತ ಭವನ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ, ತಾಲೂಕು ಕೋರ್ಟ್ ನಿರ್ಮಾಣ, ತಾಲೂಕು ಕ್ರೀಡಾಂಗಣ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೆಇಬಿ ಉಪ ವಿಭಾಗ ಕಛೇರಿ ಸ್ಥಾಪನೆ, ಅಗ್ನಿಶಾಮಕದಳದ ಕಚೇರಿ,ತಾಲೂಕು ಆಸ್ಪತ್ರೆ, ಕೊನೆ ಭಾಗದ ಕಾಲುವೆಗಳ ದುರಸ್ತಿ,ರೈತರಿಗೆ ಸಮರ್ಪಕ ಬೆಳೆ ಹಾನಿ ಪರಿಹಾರ ವಿತರಿಸಬೇಕು, ವಡಗೇರಾ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಬೇಕು ಹಾಗೂ ಇನ್ನಿತರ ತಾಲೂಕು ಕಚೇರಿಗಳನ್ನು ಆರಂಭಿಸುವುದರ ಜೊತೆಗೆ ನೂತನ ತಾಲೂಕಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ್ ಮೇಟಿ ಬಣದ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕಾ, ತಿರುಮಲ ಮುಸ್ತಾಜೀರ, ಮಹೇಶ್ ಕ್ಯಾತನಾಳ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಭೀಮಣ್ಣ ಬುದಿನಾಳ, ಶ್ರೀನಿವಾಸ್ ಜಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ತಾಲೂಕು ಕಚೇರಿ ಆರಂಭ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ
