ನೊಂದವರಿಗೆ ನ್ಯಾಯ ಕೊಡಿಸಿ- ಇಕ್ಬಾಲ್ ಕಾಸಿಂ

ವಡಗೇರಾ:-ಕಾನೂನು ಪದವಿ ಓದಲು ಹೆಚ್ಚಿನ ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಆದ್ರೇ ಕಪ್ಪು ಕೋಟು ಧರಿಸಿ ನ್ಯಾಯಾಲದಲ್ಲಿ ಸೂಕ್ತ ಸಾಕ್ಷಿಗಳನ್ನು ಕಲೆ ಹಾಕಿ ಕೇಸ್‌ ವಾದಿಸುವುದು ಇತ್ತೀಚೆಗೆ ತುಂಬಾ ಕಷ್ಟದ ಕೆಲಸವಾಗಿದೆ ಎಂದು ಜವಾಹರ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಇಕ್ಬಾಲ್ ಕಾಸಿಂ ಕಳವಳ ವ್ಯಕ್ತಪಡಿಸಿದರು.
ವಡಗೇರಾ ತಾಲೂಕಿನ ಕುಮನೂರು ಗ್ರಾಮದಲ್ಲಿ ಪ್ರಥಮ ಬಾರಿಗೆ ಕಾನೂನು ಪದವಿ ಪಡೆದ ಬಾಬು ಎಸ್ ಪೊಲೀಸ್ ಪಟೇಲ್ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನ್ಯಾಯದ ವಿರುದ್ಧ ವಾದ ಮಾಡಿ ನ್ಯಾಯ ಕೊಡಿಸುವುದು ಕಾನೂನು ಪದವಿ ಓದಿದವರ ಕೆಲಸ, ಆದ್ರೇ ಆ ಕೇಸ್ ಗಳಿಗೆ ನ್ಯಾಯ ಕೊಡಿಸಬೇಕಾದ್ರೇ ನ್ಯಾಯವಾದಿಗಳಾದ ನಾವುಗಳು ಮೊದಲ ಕೇಸ್ ನ ಅಧ್ಯಯನ ಶೀಲರಾಗಬೇಕು ಅಂದಾಗ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ ಎಂದರು.  ಹಳ್ಳಿ ಭಾಗದ ಜನ ಈ ಕಾನೂನು ಪದವಿ ಓದಲು ಇನ್ನೂ ಹೆಚ್ಚಿನ ಆಸಕ್ತಿ ತೊರಿಸಬೇಕಿದೆ. ಕೆಲವೊಬ್ಬರು ಕಾನೂನು ಪದವಿ ಪಡೆದ ಮೇಲೆ ಈ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಬಯಸದಿರುವುದು ಸಾಮಾನ್ಯವಾಗಿದೆ ಎಂದರು.
ಆದ್ರೇ ಈ ಬಾಬು ಪೊಲೀಸ್ ಪಟೇಲ್ ಹಳ್ಳಿ ಪ್ರತಿಭೆ, ಬಹಳ‌ ಕಷ್ಟಪಟ್ಟು ಓದಿ ವಕೀಲ ವೃತ್ತಿ ಪಡೆದುಕೊಂಡಿದ್ದಾರೆ, ಹಳ್ಳಿಯಿಂದ ಬಂದವರಿಗೆ ಪ್ರಾಮಾಣಿಕತೆ, ನಿಷ್ಠೆಯಿಂದ ನ್ಯಾಯ ಒದಗಿಸಲೆಂದು ಸಲಹೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ವಕೀಲ ಬಾಬು ಎಸ್ ಪೊಲೀಸ್ ಪಟೇಲ್, ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ, ನಾನು ಬಡತನದಲ್ಲೇ ವಕೀಲ ಪದವಿ ಓದು ಮುಗಿಸಿದ ವ್ಯಕ್ತಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಆದ ಅನ್ಯಾಯವನ್ನು ನಾನು ಬಹಳ ಹತ್ತಿರದಿಂದ ನೋಡಿದವನು. ಬಡ ಜನರಿಗೆ ನ್ಯಾಯ ಕೊಡಸಬೇಕು ಎಂಬ ಹಂಬಲದಿಂದ ನಾನು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ಕಾರ್ಯಕ್ರಮ ವೇಳೆ ಶಿಕ್ಷಕರಾದ ಮುದಕ್ಕಪ್ಪ, ಹಜರತ್ ಮೊಸಿನ್ ಸಾಹೇಬ್ ಖಾದ್ರಿ ಹುಲಿಕಲ್ ಜೆ ಫಯಾಜ್ ಸಾಬ್ ಖುರೇಶಿ, ಮಲ್ಲಿಕಾರ್ಜುನ, ಕುಮಲಯ್ಯ, ಮರಿಲಿಂಗಪ್ಪ, ಚಾಂದ್ ಪಟೇಲ್, ಸಲೀಂಪಾಷ್, ಕುಮಲಪ್ಪ, ಮಕದ್ದುಮ್ ಸಾಬ್, ಲತೀಪ್ ಸಾಬ್, ಲಾಲ್ ಅಹ್ಮದ್ ಪೊಲೀಸ್, ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!