ವಡಗೇರಾ: ನಮ್ಮ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು ಮುಖ್ಯಮಂತ್ರಿಗಳು ಈಗಾಗಲೇ ರೈತರಿಗೆ ಸಮರ್ಪಕ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ರೈತರಲ್ಲಿ ಆತಂಕ ಬೇಡ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೆಟಿ ಹೇಳಿದರು. ಯಾದಗಿರಿ ಮತಕ್ಷೇತ್ರದ ವಡಗೇರಾ ,ಕಂದಳ್ಳಿ, ಬೂದಿನಾಳ,ಕೋನಳ್ಳಿ, ಹಾಗೂ ಇನ್ನಿತರ ಗ್ರಾಮಗಳಲ್ಲಿ ಭೀಮಾ ನದಿ ಪ್ರವಾಹ ಮತ್ತು ಮಳೆಯಿಂದ ಹಾನಿಗೊಳಗಾದ ಜಮೀನುಗಳ ಬೆಳೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.ಬೆಳೆ ಹಾನಿ ಪ್ರದೇಶಗಳಲ್ಲಿ ಈಗಾಗಲೇ ಸರಕಾರದ ಆದೇಶದಂತೆ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದಾರೆ.ರೈತರು ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಒದಗಿಸಿ.ಸರ್ವೆ ಕೆಲಸ ಮುಗಿದ ನಂತರ ರಾಜ್ಯ ಸರ್ಕಾರ ಸಮರ್ಪಕ ಪರಿಹಾರ ನೀಡುತ್ತದೆ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದರು ಉತ್ತರ ಕರ್ನಾಟಕದಲ್ಲಿ ಮಳೆ ಭೀಮಾ ನದಿ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ ಆದರೆ ಕೇಂದ್ರ ಸರಕಾರ ಮಾತ್ರ ರಾಜ್ಯದ ಕುರಿತು ಮಲತಾಯಿ ಧೋರಣೆ ತೋರುತ್ತಿದೆ ಇದು ಸರಿಯಲ್ಲ ಕೇಂದ್ರ ಸರಕಾರ ಕೂಡಲೇ ಕೇಂದ್ರದಿಂದ ಬೆಳೆ ಸಮೀಕ್ಷೆ ನಡೆಸಲು ಅಧಿಕಾರಿಗಳ ತಂಡ ಕಳಿಸಿ ಪರಿಶೀಲನೆ ನಡೆಸಿ ರೈತರು ತುಂಬಿದ ಬೆಳವಿಮೆ ಹಣವನ್ನು ನೀಡಲು ಕಂಪನಿಗಳಿಗೆ ತುರ್ತು ಆದೇಶ ನೀಡಿ ರೈತರಿಗೆ ಬೆಳೆ ವಿಮೆ ಹಣ ಮಂಜುರಾತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಬಾಷುಮಿಯಾ ನಾಯ್ಕೊಡಿ, ಹಣಮಂತ ಜಂಬೇನೂರ, ಭೀಮಣ್ಣ ಬೂದಿನಾಳ, ಬಸನಗೌಡ ಜಡಿ,ನಿಂಗಪ್ಪ ಬಿಳಾರ, ಶರೀಫ್ ಕುರೇರ್, ನರೇಶ್,ದೇವಪ್ಪ ಜಡಿ, ಹಾಗೂ ರೈತರು ಉಪಸ್ಥಿತರಿದ್ದರು.
ನಮ್ಮ ಸರ್ಕಾರ ರೈತರ ಪರವಾಗಿದೆ ಆತಂಕ ಬೇಡ: ಡಾ.ಭೀಮಣ್ಣ ಮೇಟಿ
