ವಡಗೇರಾ: ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ರವರು ನಾಡುಕಂಡ ಅಪರೂಪದ ರಾಜಕಾರಣಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದು ಪ್ರಾಂಶುಪಾಲ ಹೊನ್ನಯ್ಯ ಕೊಂಕಲ್ ಹೆಳಿದರು. ಪಟ್ಟಣದ ಡಿಡಿಯು ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಡಿ.ಡಿ.ಯು ಸ್ವತಂತ್ರ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಿ ದೇವರಾಜ್ ಅರಸ್ ರವರ 110ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಡಿ ದೇವರಾಜ ಅರಸರು ದೀನ ದಲಿತರ ಆಶಾ ಕಿರಣ್ ಅವರ ಅವಧಿಯಲ್ಲಿ ಅತಿ ಹೆಚ್ಚು ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಿಂದಿದ್ದಾರೆ ಅವರ ತತ್ವ ಆದರ್ಶಗಳು ಸರ್ವಕಾಲಿಕ ಶ್ರೇಷ್ಠ ಎಂದು ಹೇಳಿದರು.ಇದೆ ಸಮಯದಲ್ಲಿ ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಭೀಮಣ್ಣ ಮೇಟಿ ಅವರ ಜನುಮದಿನ ಅಂಗವಾಗಿ ಶಾಲೇಯ ಆವರಣದಲ್ಲಿ ಸಸಿನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಿಡಿಯು ಸಿಬಿಎಸ್‌ಸಿ ಮುಖ್ಯ ಶಿಕ್ಷಕರಾದ ಸಜೀಶ್ ರಾಜ್ ,ಡಿ ದೇವರಾಜ ಅರಸು ಅವರ ಕುರಿತು ಪ್ರಾಸ್ತವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಯೋಜಕ ನಿಲು ಬೋಸ್ತರೇ, ಎಸ್‌ಡಿಎ ಯೋಗೇಶ್ವರ ರೆಡ್ಡಿ, ನಿಂಗಣ್ಣ ಹೈಯಾಳ,ಶಾಲಾ ಬೋಧಕರು ಹಾಗೂ ಬೋಧಕೇತರು ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.