ವಡಗೇರಾ: ಅರಣ್ಯ ನಾಶದಿಂದಲೇ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ ಎಂದು ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದ ಪರಮಪೂಜ್ಯ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಶ್ರೀ ಕರುಣೇಶ್ವರ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶುದ್ಧ ಗಾಳಿ ಉತ್ತಮ ಪರಿಸರ ನಿರ್ಮಾಣಕ್ಕೆ ಗಿಡ ಮರಗಳು ಸಂರಕ್ಷಣೆಯ ಅವಶ್ಯಕತೆ ಇದೆ ಪರಿಸರವನ್ನು ನಾವು ಕಾಪಾಡಿದ್ದೆ ಆದಲ್ಲಿ ಅದು ನಮ್ಮನ್ನು ಕಾಪಾಡುತ್ತೆ ಇತ್ತೀಚಿಗೆ ನಾವುಗಳು ದೊಡ್ಡ ದೊಡ್ಡ ಕಟ್ಟಡ ಹಾಗೂ ಇನ್ನಿತರ ಕೈಗಾರಿಕೆಗಳನ್ನು ಮಾಡುವ ಸಲುವಾಗಿ ಅರಣ್ಯವನ್ನು ನಾಶ ಮಾಡುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮಗುವಿಗೊಂದು ಮರ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮದ ಕುರಿತು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ಮಠದ ಆವರಣದಲ್ಲಿಯೂ ಕೂಡ ಸಸಿಗಳನ್ನು ಬೆಳೆಸಿ ಅರಣ್ಯ ಇಲಾಖೆಯಿಂದಲೂ ಸಸಿಗಳನ್ನು ತಂದು ದೇವಸ್ಥಾನಕ್ಕೆ ಬರುವಂತ ಭಕ್ತಾದಿಗಳಿಗೆ ಸಸಿಗಳನ್ನು ನೀಡಿ ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ನಾವೆಲ್ಲರೂ ಅವರ ಜೊತೆ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ಹೇಳಿದರು.ಇದೇ ಸಮಯದಲ್ಲಿ ವಿವಿಧ ಬಗೆಯ ನೂರಾರು ಸಸಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ವೇಣುಗೋಪಾಲ್ ಗುರೂಜಿ, ವೇದಮೂರ್ತಿ ಶಿವಯ್ಯ ಸ್ವಾಮಿ ಸಾತಕೇಡ, ಚಂದ್ರಶೇಖರ ಗೌಡ ಗೋನಾಲ,ವೆಂಕಟರೆಡ್ಡಿ ಗೌಡ ಶಿವನೂರ ,ಇಂಜಿನಿಯರ್ ಅರವಿಂದ್ ಗರಗಪಲ್ಲಿ, ಮಲ್ಲಿಕಾರ್ಜುನ ಸ್ವಾಮಿ, ಶಂಕ್ರಪ್ಪ ಗೌಡ, ಬನ್ನಯ ಸ್ವಾಮಿ ,ಗುರು ಅಗ್ನಿಹಾಳ, ಮಲ್ಲನಗೌಡ, ಅಪ್ಪಣ್ಣಗೌಡ ರಾಯಚೂರು ,ಬಸವರಾಜ್ ಕಾಟರಪಲ್ಲಿ,ಸಿದ್ದಪ್ಪಗೌಡ ಶಿವಪುರ, ವೀರೇಶ್ ಪಾಟೀಲ್ ಕೆಶ್ವಾರ,ಹುಸೇನಪ್ಪ, ಸೂಗಪ್ಪ ಗೌಡ, ನಾಗರಾಜ ಗೌಡ, ಭೀಮರಾಯ ಗೌಡ, ಗಡ್ಡೆಲಿಂಗ ಬೆಂಡೆಬೆಂಬಳಿ,ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಮಹಿಳೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ನವಚೇತನ ಟ್ರಸ್ಟ್ ಅಧ್ಯಕ್ಷ ನಿಂಗಣ್ಣ ಜಡಿ ನಿರೂಪಿಸಿ ವಂದಿಸಿದರು
ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ: ಶ್ರೀ ಕರುಣೇಶ್ವರ ಸ್ವಾಮಿಜೀ
