ಒಂದೇ ಎಂಬ ಭಾವಬಂದಾಗ ಸದೃಡ ರಾಷ್ಟç ನಿರ್ಮಾಣ-ಅಗಸರ

ತಾಳಿಕೋಟೆ, ಎಲ್ಲ ಸಮುದಾಯದವರು ಜಾತಿ, ಮತ, ಪಂಥವೆನ್ನದೇ ನಾವೆಲ್ಲರೂ ಒಂದೇ ಎಂಬ ಭಾವ ಬೆಳೆಸಿಕೊಂಡಾಗ ಮಾತ್ರ ಬಲಿಷ್ಠ ರಾಷ್ಟçವಾಗಲು ಸಾದ್ಯವೆಂದು ರಾಷ್ಟಿçÃಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿಗಳಾದ ಗಂಗಾಧರ ಅಗಸರ ಹೇಳಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ ಆಶ್ರಯ ಕಾಲೋನಿಯಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡ ರಾಷ್ಟಿçÃಯ ಸೇವಾ ಯೋಜನೆಯ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಧರ್ಮ. ಆಚಾರ ಸಂಸ್ಕಾರವನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗದೆ ಆರೋಗ್ಯದ ಕಡೆ ಗಮನ ಹರಿಸಬೇಕು ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಇದೆಲ್ಲವೂ ನಿಮಗೆ ರಾಷ್ಟಿçÃಯ ಸೇವಾ ಯೋಜನೆಯಿಂದ ಮಾತ್ರ ಕಲಿಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀ.ವಿ.ಸಂಘದ ಕಾರ್ಯದರ್ಶಿಗಳಾದ ಎಮ್.ಎಸ್. ಸರಶೆಟ್ಟಿ ಅವರು ಮಾತನಾಡಿ ಸಮಾಜ ಸೇವೆ ಅತ್ಯಂತ ಪವಿತ್ರವಾದದ್ದು ನಿಸ್ವಾರ್ಥದಿಂದ ಸೇವೆ ಮಾಡುವ ಗುಣ ಯಾರಲ್ಲಿ ಇರುತ್ತದೆಯೋ ಅವರು ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಬಾಳಲು ಸಾಧ್ಯ ಎಂದರು.
. ಇನ್ನೋರ್ವ ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶೀನಾಥ ಮುರಾಳ ಅವರು ಮಾತನಾಡಿ ರಾಷ್ಟçದ ಐಕ್ಯತೆ ಮತ್ತು ಸಮಗ್ರತೆಗೆ ತನು ಮನ ಅರ್ಪಣೆಯ ಭಾವ ವಿದ್ಯಾರ್ಥಿಯ ದಿಸೆಯಲ್ಲಿ ಕರಗತವಾಗಬೇಕು ಅಂದಾಗ ಮಾತ್ರ ಸಮಸ್ಯಗಳನ್ನು ನಿರ್ಭೀತಿಯಿಂದ ನಿವಾರಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಮ್.ಬಂಟನೂರ ಅವರು ಮಾತನಾಡಿ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಇಂತಹ ಶಿಬಿರಗಳ ಶಿಬಿರಗಳ ಮೂಲಕ ಸಮಾಜ ಪರಿವರ್ತನೆಗೆ ಪ್ರೇರಣೆಯಾಗಬೇಕು ಅಂದಾಗ ಮಾತ್ರ ಸದೃಢ, ಸ್ವಾಸ್ಥ÷್ಯ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ ಎಂದರು.
ಏನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎ.ಎ ಗಂಗನಗೌಡರ ಪ್ರಾಸ್ತಾಯಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ಹುನಗುಂದ, ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ಕಡಕಲ್, ಪ್ರಥಮ ವರ್ಷದ ವರ್ಗ ಪ್ರತಿನಿಧಿ ಮಯೂರ ಕೊಡಬಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ.ಇಡಿ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದರು.
ಪ್ರಶಿಕ್ಷಣಾರ್ಥಿ ಪಾರ್ವತಿ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಪ್ರಶಿಕ್ಷಣಾರ್ಥಿ ಭಾಗ್ಯವಂತಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಕೀರ್ತಿ ಹಂದ್ರಾಳ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಐಶ್ವರ್ಯ ದೊಡ್ಡಮನಿ ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!