ತಾಳಿಕೋಟೆ, ಶೈಕ್ಷಣಿಕ ರಂಗದಲ್ಲಿ ಉತ್ತಮ ಕಾರ್ಯದ ಜೊತೆಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರತಿವರ್ಷವು ರಾಜ್ಯ ಸರ್ಕಾರವು ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಬಳಗಾನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರಿಗೆ ಲಭಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.
ಕಳೆದ ೧೦ ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರು ಶೈಕ್ಷಣಿಕ ರಂಗದ ಬುನಾದಿಯಾಗುವದರ ಜೊತೆಗೆ ಮಕ್ಕಳಿಗೆ ಕಲಿಕಾ ಗುಣಮಟ್ಟದ ಶಿಕ್ಷಣ ನೀಡುವದರೊಂದಿಗೆ ವಿವಿಧ ಕಲಾ ಸ್ಪರ್ದೆಗಳ ಜೊತೆಗೆ ಶೈಕ್ಷಣಿಕವಾಗಿ ತಮ್ಮ ಶಾಲೆಯ ಮಕ್ಕಳು ರಾಜ್ಯಮಟ್ಟದ ವರೆಗೂ ಪ್ರತಿನಿಧಿಸುವಂತಹ ಛಲವನ್ನು ತುಂಬಿ ಶಾಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸಿದ ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಅವರ ಸೇವಾ ವೃತ್ತಿಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರಿಗೆ ಈಗಾಗಲೇ ಜಿಲ್ಲೆಯ ಅಲ್ಲದೇ ರಾಜ್ಯದ ಅನೇಕ ಸಂಸ್ಥೆಗಳು ಇವರ ಸಾಹಿತಿಕವಾದ ಚಟುವಟಿಕೆಗಳನ್ನು ಹಾಗೂ ಉತ್ತಮ ಶಿಕ್ಷಕ ವೃತ್ತಿಯನ್ನು ಪರಿಗಣಿಸಿ ಸುಮಾರು ೫೦ ಕ್ಕೂ ಅಧಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು ಶಿಕ್ಷಕಿ ಮಡಿವಾಳಮ್ಮನವರು ಈಗಾಗಲೇ ಅಂತರAಗದ ಬಾವಲೆಗಳು ಎಂಬ ಕವನ ಸಂಕಲವನ್ನು ಸ್ವರಚಿತವಾಗಿ ತಯಾರಿಸಿ ಬಿಡಗಡೆಗೊಳಿಸಿದ್ದಾರೆ.
ದಿ. ೫ ಶುಕ್ರವಾರರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ವಿಧಾನಸೌದದ ಬ್ಯಾಂಕ್ವೇಟ್ ಹಾಲಿನಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಶಿಕ್ಷಣ ಸಚೀವ ಮಧು ಬಂಗಾರೆಪ್ಪ, ಉನ್ನತ ಶಿಕ್ಷಣ ಸಚಿವ ಸುಧಾಕರ ಅವರು ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಪುಟ್ಟಣ್ಣ, ಕೆ ಗೋವಿಂದರಾಜು, ರಾಮೋಜಿಗೌಡ, ಡಿ.ಟಿ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಶ್ರೀಮತಿ ರಶ್ಮಿ ಮಹೇಶ, ಕಾಲೇಜು& ತಾಂತ್ರಿಕ ಶಿಕ್ಷಣ ಆಯುಕ್ತರಾದ ಶ್ರೀಮತಿ ಎನ್. ಮಂಜುಶ್ರೀ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ತಾಳಿಕೋಟೆ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಬೀರಗೊAಡ, ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.