ಮಕ್ಕಳಿಗೆ ಮನೆಪಾಠದೊಂದಿಗೆ ಆಟದ ಪಾಠವಿರಲಿ-ವಿರಕ್ತಮಠ

ತಾಳಿಕೋಟೆ, ಎಳೆಯ ವಯಸ್ಸಿನಲ್ಲಿರುವ ಮಕ್ಕಳಿಗೆ ಬೆಳವಣಿಗೆ ಯಾಗುವದು ಅಗತ್ಯವಾಗಿರುತ್ತದೆ ಅಂತಹ ಮಕ್ಕಳಿಗೆ ಬೆಳವಣಿಗೆಗೆ ಅಗತ್ಯವಿರುವಂತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಅಳವಡಿಸಿಕೊಳ್ಳಲು ಮಾತಾಪಿತರು ಸೂಚಿಸುತ್ತಿರಬೇಕೆಂದು ಸ್ಥಳೀಯ ವೀ.ವಿ.ಸಂಘದ ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮಿಕ ಶಾಲೆಯ ಅಧ್ಯಕ್ಷರಾದ ವೇ.ಮುರುಘೇಶ ವಿರಕ್ತಮಠ ಅವರು ನುಡಿದರು.
ಮಂಗಳವಾರರAದು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖಾ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ೨೦೨೫-೨೬ನೇ ಸಾಲಿನ ತಾಳಿಕೋಟೆ ಕ್ಲಷ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ವ್ಯಾಯಾಮಷ್ಯ ಶರೀರ ಭಲಂವರ್ತತೆ ಎಂಬುದನ್ನು ಸಂಸ್ಕೃತದಲ್ಲಿ ಸೂಚಿಸಲಾಗಿದೆ ಕಾರಣ ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡಾ ಮನೋಭಾವ ಹಾಗೂ ವ್ಯಾಯಾಮದ ಆಸನಗಳನ್ನು ಕರಗತ ಮಾಡಿಕೊಂಡರೆ ಆರೋಗ್ಯದಿಂದ ಸದಾ ಬಧುಕಿ ಬಾಳಲು ಸಾದ್ಯವಾಗುತ್ತದೆ ಆದರ್ಶ ಕ್ರೀಡಾಪಟುಗಳಾಗಿ ಬಾಳಿ ಬೆಳಗಲು ಸಾದ್ಯವಾಗಲಿದೆ ಎಂದರು.
ಇನ್ನೋರ್ವ ಕ್ರೀಡಾ ದ್ವಜಾರೋಹಣ ನೇರವೇರಿಸಿದ ಶಿಕ್ಷಣ ಸಂಯೋಜಕರಾದ ಸುರೇಶ ಹಿರೇಮಠ ಅವರು ಮಾತನಾಡಿ ದೈಹಿಕ ಶಿಕ್ಷಣದಿಂದ ಮಕ್ಕಳ ಆರೋಗ್ಯದಲ್ಲಿ ಸುದಾರಣೆಯಾಗುತ್ತ ಸಾಗಲಿದೆ ಇಂದಿನ ದಿನಮಾನದಲ್ಲಿ ಪಾಲಕರು ಸಹ ಮಕ್ಕಳು ಹೆಚ್ಚಿನ ಅಂಕಗಳನ್ನು ಗಳಿಸಿಕೊಳ್ಳಲಿ ಎಂದು ಓದು ಬರಹಕ್ಕೆ ಬಹಳೇ ಒತ್ತಡ ಹಾಕುತ್ತಿರುವದು ಕಂಡುಬರುತ್ತಲಿದೆ ಕಾರಣ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕಾರ್ಯ ಮಾಡಬೇಕು ಓದು ಬರಹದ ಪಾಠದಲ್ಲಿಯೂ ಸಹ ಸಮಯವನ್ನು ಉಳಿತಾಯ ಮಾಡಿಕೊಂಡು ವ್ಯಾಯಾಮವಾಗಲಿ ಅಥವಾ ಆಟವನ್ನಾಗಲಿ ರೂಡಿಸಿಕೊಳ್ಳುವ ಹವ್ಯಾಸವನ್ನು ಬೆಳೆಸಿದರೆ ರಾಜ್ಯಮಟ್ಟದ ರಾಷ್ಟçಮಟ್ಟದ ಕ್ರೀಡಾಪಟುಗಳಾಗಿ ಹೊರ ಹೊಮ್ಮಲು ಸಾದ್ಯವೆಂದ ಅವರು ಆಟದಿಂದ ನಾಯಕತ್ವ ಗುಣ ಮಾನಸಿಕ ಸಮತೋಲನೆ ಕಾಯ್ದುಕೊಳ್ಳಲು ಸಾದ್ಯವಾಗುತ್ತದೆ ಶಿಕ್ಷಕರೊಂದಿಗೆ ಸಹಕರಿಸಿ ಮಕ್ಕಳನ್ನು ಆಟೋಪಾಠ ಇವೇರಡರಲ್ಲಿ ಭಾಗವಹಿಸುವಂತೆ ಸಹಕರಿಸಬೇಕು ಯಾವುದೇ ವಿಷಯಕ್ಕಾದರೂ ಮಕ್ಕಳ ಮೇಲೆ ಹೊರೆ ಬಿಳ್ಳುವಂತಹ ಕಾರ್ಯ ವಾಗಬಾರದೆಂದರು.
ಇನ್ನೋರ್ವ ಸಿಆರ್‌ಪಿ ರಾಜು ವಿಜಾಪೂರ ಅವರು ಮಾತನಾಡಿ ಕ್ರೀಡಾಪಟುಗಳಿಗೆ ಕೆಲವು ಸೂಚನೆಗಳನ್ನು ನೀಡಿದರಲ್ಲದೇ ಕ್ರೀಡೆಯಲ್ಲಿ ಪ್ರಾಮಾಣಿಕತನದಿಂದ ನಡೆದುಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದ ಮೊದಲಿಗೆ ಕ್ರೀಡಾ ಪ್ರಮಾಣ ವಚನ ಭೋದಿಸಲಾಯಿತು.
ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಜುಬೇದಾ ಜಮಾದಾರ, ಬಿ.ಆರ್.ಪಿ.ಕಾಶಿನಾಥ ಸಜ್ಜನ, ಶಿಕ್ಷಕ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಕಾರ್ಯದರ್ಶಿ ಸುರೇಶ ಬೀರಗೊಂಡ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ರಾವುತ್ ಪೂಜಾರಿ, ಸಿಆರ್‌ಪಿ ಎಸ್.ಎಂ.ಪಾಲ್ಕಿ, ವೀ.ವಿ.ಸಂಘದ ನಿರ್ದೇಶಕರಾದ ಬಿ.ವ್ಹಿ.ಚೊಂಡಿಪಾಟೀಲ, ರಮೇಶ ಸಾಲಂಕಿ, ಸಂತೋಷ ಮುರಾಳ, ಮುಖ್ಯಗುರುಗಳಾದ ಲಕ್ಷಿö್ಮÃ ಮಣೂರ, ವ್ಯವಸ್ಥಾಪಕ ಎಸ್.ಎ.ಶರಣರ, ಸ್ಕೂಲ್ ಗೇಮ್ಸ್ ಪೇಡ್ರೇಷನ್ ಆಫ್ ಇಂಡಿಯಾದ ಆಯ್.ಎಲ್.ಆಲಮೇಲ, ಮೊದಲಾದವರು ಉಪಸ್ಥಿತರಿದ್ದರು.
ಈ ಕ್ರೀಡಾಕೂಟದಲ್ಲಿ ನಿಯಮದಂತೆ ೧೪ ವರ್ಷದ ಒಳಗಿನ ಮಕ್ಕಳು(ಎಸ್‌ಜಿಎಫ್‌ಐ), ಆಯ್‌ಡಿ ಕಾರ್ಡ ಹೊಂದಿದ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕಿ ಕೀರ್ತಿ ಹಿರೇಮಠ ಹಾಗೂ ಸುರೇಶ ಬಡಿಗೇರ ಅವರು ಸ್ವಾಗತಿಸಿದರು. ಅಶ್ವಿನಿ ಕೊಡೇಕಲ್ಲ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!