ಮುದ್ದೇಬಿಹಾಳ : ಅವಳಿ ಜಿಲ್ಲೆಯ ಸರ್ಕಾರಿ ನೌಕರರು,ಸ್ನೇಹಿತರು,ನನ್ನ ಗೆಳೆಯರ ಬಳಗದ ಆಶೀರ್ವಾದ,ಪೂರ್ವಜನ್ಮದ ಪುಣ್ಯವೇ ಇಂದು ನಾನು ರಾಜ್ಯಮಟ್ಟದ ಹುದ್ದೆಯಲ್ಲಿರುವುದಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತದ ನೂತನ ನಿರ್ದೇಶಕ ಆನಂದಗೌಡ ಬಿರಾದಾರ ಹೇಳಿದರು.
ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು,ನೌಕರ ಬಾಂಧವರು ಹಾಗೂ ಆನಂದಗೌಡ ಗೆಳೆಯರ ಬಳಗದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ,ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಉನ್ನತ ಹುದ್ದೆ ದೊರೆಯಲು ಸಚಿವರಾದ ಎಚ್.ಕೆ.ಪಾಟೀಲ, ಶಾಸಕರಾದ ಸಿ.ಎಸ್.ನಾಡಗೌಡ,ಅಶೋಕ ಮನಗೂಳಿ, ಯಶವಂತ್ರಾಯಗೌಡ ಪಾಟೀಲ,ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ, ನನ್ನ ಗೆಳೆಯರ ಬಳಗದ ಬೆಂಬಲ,ನೌಕರರ ಪ್ರೋತ್ಸಾಹ,ಪ್ರೀತಿ,ಅಭಿಮಾನವೇ ಎತ್ತರಕ್ಕೇರಿಸಿದ್ದು ನಿಮ್ಮ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ ಮಾತನಾಡಿ, ಜಿಓಸಿಸಿ ಬ್ಯಾಂಕ್ ದೇಶದಲ್ಲಿ ಸಹಕಾರ ಕ್ಷೇತ್ರದ ಬ್ಯಾಂಕಿAಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.೨೦೨೨ ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮ ಬ್ಯಾಂಕಿಗೆ ಅತ್ಯುನ್ನತ ಪ್ರಶಸ್ತಿ ಪ್ರದಾನ ಮಾಡಿದ್ದರು.೫೫೦ ಕೋಟಿ ರೂ.ಬ್ಯಾಂಕಿನಲ್ಲಿ ಠೇವಣಿ ಇದೆ.ನೌಕರ ವರ್ಗದವರು ಬ್ಯಾಂಕಿನ ಮೇಲೆ ಇಟ್ಟಿರುವ ವಿಶ್ವಾಸದಿಂದಲೇ ಕಳೆದ ೧೧೭ ವರ್ಷದಿಂದ ಬ್ಯಾಂಕು ಪ್ರಗತಿಯಲ್ಲಿದೆ.ಸಚಿವರಾದ ಎಚ್.ಕೆ.ಪಾಟೀಲ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆದಿದ್ದೇವೆ.ವಿಜಯಪುರ ಜಿಲ್ಲೆಯ ಮೇಲೆ ಅವರ ಮಮತೆ,ಕಾಳಜಿ,ಅಭಿಮಾನ ದೊಡ್ಡಾಗಿದೆ ಎಂದರು.ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎಂ.ಬಿ.ಬಿರಾದಾರ ಮಾತನಾಡಿ, ಹಲವು ವರ್ಷಗಳ ಹಿಂದೆ ಸರ್ಕಾರಿ ನೌಕರಿ ಮಾಡುವುದು ಸವಾಲಿನ ಕೆಲಸವಾಗಿರಲಿಲ್ಲ.ಸುಲಭದ ಕೆಲಸವಾಗಿತ್ತು.ಆದರೆ ಇಂದು ಅತ್ಯಂತ ಸವಾಲಿನ ಕೆಲಸವಾಗಿದೆ.ಸರ್ಕಾರಿ ನೌಕರಿ ಅದರಲ್ಲೂ ಆರೋಗ್ಯ,ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸುತ್ತಿದ್ದೇವೆ.ಇಂತಹದ್ದರ ಮಧ್ಯೆಯೂ ಆನಂದಗೌಡ ಬಿರಾದಾರ ಒಳ್ಳೆಯ ಹೆಸರು ಸಂಪಾದಿಸಿ ರಾಜ್ಯಮಟ್ಟದ ಹುದ್ದೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಓಸಿಸಿ ಅಧ್ಯಕ್ಷ ಅರ್ಜುನ ಲಮಾಣಿ,ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ಜಿಓಸಿಸಿ ಬ್ಯಾಂಕ್ ಉಪಾಧ್ಯಕ್ಷೆ ಪುಷ್ಪಾ ಗಚ್ಚಿನಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ,ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಅನಿಲಕುಮಾರ ಶೇಗುಣಸಿ,ಹುನಗುಂದ ತಾಲ್ಲೂಕು ಆಸ್ಪತ್ರೆಯ ಭದ್ರಣ್ಣವರ, ನಿಡಗುಂದಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಂ.ಎA.ಮುಲ್ಲಾ ಮಾತನಾಡಿದರು. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ, ಡಾ.ಮಲ್ಲಮ್ಮ ರೆಡ್ಡಿ,ಬಸವನ ಬಾಗೇವಾಡಿ ಪ್ರಸೂತಿ ವೈದ್ಯೆ ಡಾ.ಮಹೇಶ್ವರಿ,ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಜಿ.ಮುರನಾಳ,ಆರೋಗ್ಯ ಇಲಾಖೆ ಎಲ್ಲ ವೃಂದಗಳ ಜಿಲ್ಲಾಧ್ಯಕ್ಷ ಮಹ್ಮದಯಾಸೀನ ಮೋಮಿನ ಮೊದಲಾದವರು ಇದ್ದರು. ದೀಪಾರತ್ನಶ್ರೀ ಪ್ರಾರ್ಥನಾ ಗೀತೆ ಹಾಡಿದರು.ಆನಂದಗೌಡ ಗೆಳೆಯರ ಬಳಗದ ಸದಸ್ಯ ವಿಠ್ಠಲ ಕಿಲಾರಟ್ಟಿ ಸ್ವಾಗತಿಸಿದರು.ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಶೈಲ ಹೂಗಾರ ನಿರೂಪಿಸಿ ವಂದಿಸಿದರು.


