ಸುರಪುರ: ನಗರದ ರಂಗಂಪೇಟೆ ಹಾಗೂ ಸುರಪುರದಲ್ಲಿ ಅದ್ದೂರಿಯಾಗಿ ಪ್ರವಾದಿ ಮಹಮ್ಮದರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ನಗರದಾದ್ಯಂತ ಅದ್ದೂರಿ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮದೀನಾ ಪ್ರತಿ ಕೃತಿ ನಿರ್ಮಿಸಿ ಜಯ ಘೋಷಗಳನ್ನ ಮೊಳಗಿಸುತ್ತಾ ಮೆರವಣಿಗೆ ನಡೆಸಲಾಯಿತು. ರಂಗಂಪೇಟೆಯ ದೊಡ್ಡ ಬಜಾರ ನಾಗರೇಶ್ವರ ದೇವಾಲಯ ಮೂಲಕ ಬಿಸ್ತಿ ಗಲ್ಲಿಯ ವರೆಗೆ ಮೆರವಣಿಗೆ ನಡೆಯಿತು . ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದರಂತೆ ಸುರಪುರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಎಲ್ಲರೂ ಹಬ್ಬದ ಬಾವುಟಗಳನ್ನು ಹಿಡಿದು ಜಯಘೋಷ ಹಾಕುತ್ತ ಹರ್ಷ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಅನೇಕ ಮುಖಂಡರು ಮಕ್ಕಳು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಸುರಪುರ:ಈದ್ ಮಿಲಾದ್ ಹಬ್ಬ ಆಚರಣೆ
