ಸುರಪುರ: ತಾಲ್ಲೂಕಿನ ತಳವಾರಗೇರಾ ಗ್ರಾಮದಲ್ಲಿ ಪ್ರಕಾಶ ಪತ್ತಾರ ಎನ್ನುವವರ ಮನೆಯಲ್ಲಿ ಫೆಬ್ರವರಿ ೨೨ ರಂದು ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪೊಲೀಸರು,ಕಳ್ಳತನ ಮಾಡಿದ್ದ ಬಂಗಾರ ಆಭರಣಗಳನ್ನು ವಶಪಡಿಸಕೊಂಡಿದ್ದಾರೆ.
ಅOದಾಜು ೩.೭೮ ಲಕ್ಷ ಮೌಲ್ಯದÀ ೭೦ ಗ್ರಾಂ ಬಂಗಾರದ ವಿವಿಧ ಆಭರಣಗಳು ಮತ್ತು ೧ ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವ ಕುರಿತು ಫೆ.೨೨ ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ವಿಜಯಪುರ ಜಿಲ್ಲೆ,ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ನಂದ್ಯಾಳ ಎನ್ನುವ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದ್ದು,ಆರೋಪಿತ ನಿಂದ ಅಂದಾಜು ೩ ಲಕ್ಷ ೨೪ ಸಾವಿರ ಮೌಲ್ಯದ ೬೦ ಗ್ರಾಂ ಬಂಗಾರದ ವಿವಿಧ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ ,ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಸುರಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ಜಾವಿದ್ ಇನಾಂದಾರ್ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿರುವ ಸುರಪುರ ಠಾಣೆಯ ಪಿ.ಐ ಉಮೇಶ ಎಮ್. ನೇತೃತ್ವದಲ್ಲಿನ ಪಿಎಸ್ಐ ಸಿದ್ದಣ್ಣ ಯಡ್ರಾಮಿ,ಮಲ್ಲಯ್ಯ ಪಿ.ಸಿ,ಪ್ರಕಾಶ ಪಿ.ಸಿ,ಹುಸೇನಬಾಷಾ ಸಿ.ಪಿ.ಸಿ,ಲಕ್ಷö್ಮಣ ಪಿ.ಸಿ ಹಾಗೂ ರಮೇಶ ಕಾಂಬ್ಳೆ ಪಿಐ ಬೆರಳಚ್ಚು ಘಟಕ ಯಾದಗಿರಿ,ಸಿಡಿಆರ್ ಘಟಕ ಯಾದಗಿರಿಯ ಸುರೇಶ ಎಆರ್ಎಸ್ ರವರ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಳವಾರಗೇರಾ : ಕಳ್ಳತನ ಆರೋಪಿ ಬಂಧನ
