ಸುರಪುರ : ಪ್ರಥಮ ಬಾರಿಗೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

ಸುರಪುರ: ನಗರದಲ್ಲಿ ಇದೇ ಮೊದಲ ಬಾರಿಗೆ 11 ದಿನಗಳ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುವುದು ಎಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಮುಖಂಡರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ತಹಸೀಲ್ದಾರ್ ಕಛೇರಿಗೆ ಹೋಗುವ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿನ ಸ್ಥಳದಲ್ಲಿ ಆಗಸ್ಟ್ 27 ರಂದು ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಎಲ್ಲಾ ಜಾತಿ,ಮತ, ಧರ್ಮಿಯರು ಹಾಗೂ ಸಾಮೂಹಿಕ ಸಂಘಟನೆಗಳು ಸೇರಿದಂತೆ ಎಲ್ಲರೂ ಆಚರಣೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಜಾತಿ, ಜಾತಿ ಎಂಬ ಭಾವನೆ ಹೆಚ್ಚಾಗಿದ್ದು ಅದನ್ನು ಹೋಗಲಾಡಿಸಲು ಎಲ್ಲಾ ಜಾತಿ ಜನಾಂಗದವರು ಸೇರಿಕೊಂಡು ಭೇದ ಭಾವ ಮರೆತು ಹಿಂದೂ ಮಹಾ ಗಣಪತಿ ಕೂಡಿಸಲು ನಿರ್ಧರಿಸಲಾಗಿದೆ ಹಾಗೂ ಪಕ್ಷಾತೀತವಾಗಿ ಹಾಲಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಎಲ್ಲಾ ಪಕ್ಷದ ನಾಯಕರನ್ನು ಆಹ್ವಾನಿಸಲಾಗುವುದು. 11 ಅಡಿ ಎತ್ತರದ ಮಹಾ ಗಣಪತಿ ಇರಲಿದ್ದು ಪ್ರತಿನಿತ್ಯ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಜೀ ಕನ್ನಡ ಧಾರಾವಾಹಿ ಕಲಾವಿದರ ರಸಮಂಜರಿ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ತಾಲ್ಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿ ಕೂಡಿಸುವ ಗಣೇಶನ ಭಕ್ತಾಧಿಗಳು ತಮ್ಮ ಗಣಪತಿಗಳ ವಿಸರ್ಜನೆ ಮಾಡಿ 11 ದಿನಕ್ಕೆ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಈ ಬಾರಿಯ ಮಹಾ ಗಣಪತಿಯನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಬಂದು ದರ್ಶನ ಪಡೆದು ಪುನಿತರಾಗ ಬೇಕು ಹಾಗೂ ಹಿಂದೂ ಭಕ್ತಾಧಿಗಳು ಎಲ್ಲರೂ ಒಗ್ಗಟ್ಟಾಗಿ ವಿಸರ್ಜನೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಲು ಸಹಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ನಾಯಕ ಬೈರಿಮರಡಿ, ಸಂದೀಪ್ ಜೋಷಿ, ಶಿವುಮೋನಯ್ಯ ಎಲ್.ಡಿ.ನಾಯಕ,ಮಲ್ಲು ದಂಡಿನ್, ಶರಣು ನಾಯಕ ಡೊಣ್ಣಿಗೇರ, ಜಗದೀಶ್ ಪಾಟೀಲ್,ರಾಜು ಪುಲ್ಸೆ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಭೀಮನಗೌಡ ಲಕ್ಷ್ಮೀ ಹೆಮನೂರ,ಭೀಮು ನಾಯಕ ಮಲ್ಲಿಭಾವಿ, ದೇವಿಂದ್ರಪ್ಪ, ಗೋಪಾಲ್ ಸತ್ಯಂಪೇಟೆ, ಶಿವರಾಜ್ ವಗ್ಗಾರ್,ಮೌನೇಶ ನಾಯಕ, ಗಂಗಾಧರ ನಾಯಕ,ವಿಜಯಕುಮಾರ್ ಚಿಟ್ಟಿ, ಶ್ರೀನಿವಾಸ ಪಾಣಿಭಾತೆ,ಸುರೇಶ ಚಿನ್ನಾಕರ್, ಬಸವರಾಜ ಕವಡಿಮಟ್ಟಿ,ಪರಮಣ್ಣ ಕಕ್ಕೇರಾ, ನಾರಾಯಣರಾವ ಜುಜಾರೆ, ವೆಂಕಟೇಶ ಪ್ಯಾಪ್ಲಿ,ಶ್ರೀನಿವಾಸ ಲಕ್ಷ್ಮೀಪುರ,ಆನಂದ ರತ್ತಾಳ, ದೇವಿಂದ್ರಪ್ಪ ಅಜ್ಜಕೊಲ್ಲಿ, ದತ್ತು ನಾಯಕ, ವಿನೋದ್ ನಾಯಕ ಸೇರಿದಂತೆ ಅನೇಕರಿದ್ದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿ ಪತ್ರಗಳ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!