ಸುರಪುರ : ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಕುಸ್ತಿ ಪಂದ್ಯಾವಳಿ ನಡೆಸಲಾಯಿತು.
ದೇವಸ್ಥಾನದ ಆವರಣದಲ್ಲಿ ಕುಸ್ತಿ ಪಂದ್ಯಾವಳಿಗೆ ಅಂಕಣವನ್ನು ಸಿದ್ಧಗೊಳಿಸಲಾಗಿತ್ತು, ಸುರಪುರ ರಾಜವಂಶಸ್ಥರಾದ ರಾಜ ಕೃಷ್ಣಪ್ಪ ನಾಯಕ ಅವರು ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ವಾಗಣಗೇರ,ದೇವರಗೊನಾಲ ಹಾಗೂ ಶಹಾಪುರ ತಾಲ್ಲೂಕಿನ ರಸ್ತಾಪುರ ದೋರನಹಳ್ಳಿ,ಗೋಗಿ ಸೇರಿದಂತೆ ಕಲಬುರ್ಗಿ,ವಿಜಯಪುರ ಇತರೆ ಜಿಲ್ಲೆಗಳಿಂದಲೂ ಅನೇಕ ಜನ ಕುಸ್ತಿಪಟುಗಳು ಭಾಗವಹಿಸಿದ್ದರು.
ಕುಸ್ತಿ ಪಂದ್ಯಾವಳಿಯಲ್ಲಿ ಮೊದಲಿಗೆ ನಗದು ಬಹುಮಾನದ ಕುಸ್ತಿ ಪಂದ್ಯಾವಳಿ ನಡೆಯಿತು ಈ ಸಂದರ್ಭದಲ್ಲಿ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಅಶೋಕ ಎನ್ನುವ ಕುಸ್ತಿಪಟು ಕುಸ್ತಿಯನ್ನು ಗೆದ್ದಿದ್ದು, ಈ ಕುಸ್ತಿ ಪಟುವಿಗೆ ರಾಜಾ ಕೃಷ್ಣಪ್ಪ ನಾಯಕ ಅವರು ಬೆಳ್ಳಿಯ ಬಹುಮಾನವನ್ನು ತೊಡಿಸಿ ನಗದು ಬಹುಮಾನವನ್ನು ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಅರಸು ಮನೆತನದ ರಾಜಾ ಲಕ್ಷ್ಮಿ ನಾರಾಯಣ ನಾಯಕ ಸೇರಿದಂತೆ ಅನೇಕ ಮುಖಂಡರು ಸೇರಿದಂತೆ ಸಾವಿರಾರು ಜನ ಭಾಗವಹಿಸಿ ರೋಚಕವಾಗಿ ನಡೆದ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು.