ಜನ್ಮ ದಿನಾಚರಣೆ;ರೋಗಿಗಳಿಗೆ ಹಣ್ಣು ಹಾಲು ವಿತರಣೆ

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಕೆ.ಸಿ. ರಾಜಪ್ಪ (ಟೈಗರ್) ಅವರ 52ನೇ ಜನ್ಮದಿನದ ಅಂಗವಾಗಿ ಸುರಪುರ ತಾಲೂಕಾ ಘಟಕದ ವತಿಯಿಂದ ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿ ಆಚರಿಸಲಾಯಿತು..

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ಮಾತನಾಡಿ, ಜಯಕರ್ನಾಟಕ ರಕ್ಷಣಾ ಸೇನೆ ಕೇವಲ ಹೋರಾಟ ಮಾತ್ರವಲ್ಲದೆ ಜನರಿಗೆ ಉಪಯೋಗವಾಗುವ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ‌ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಬೈರಿಮಡ್ಡಿ, ತಾ.ಕಾರ್ಯಾಧ್ಯಕ್ಷ ಶಿವರಾಜ ವಗ್ಗರ್, ತಾ ಕಾರ್ಯದರ್ಶಿ ಕೃಷ್ಣ ಹಾವಿನ ಬಾದ್ಯಾಪೂರ, ಆಟೋ ಘಟಕದ ಅಧ್ಯಕ್ಷ ಹನುಮಂತ ರತ್ತಾಳ, ನಗರ ಘಟಕದ ಅಧ್ಯಕ್ಷ ಶಿವಕುಮಾರ ಗಾಜಲದಿನ್ನಿ,ಗೂಡ್ಸ್ ಘಟಕದ ಅಧ್ಯಕ್ಷ ರಂಗಪ್ಪ,ರೈತ ಘಟಕದ ಅಧ್ಯಕ್ಷ ಧನರಾಜ ರಾಠೋಡ್, ಯುವ ಘಟಕದ ಅಧ್ಯಕ್ಷ ರವಿ ನಾಯಕ,ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ ಓಕಳಿ,ಬಸ್ಸು D.R , ವಿಶ್ವ ಟರ್ಕೆರ್, ದೀವಳಗುಡ್ಡ ವಾರ್ಡಿನ ಅಧ್ಯಕ್ಷ ಶ್ರೀಶೈಲ ಕುರಿ, ನಾಗರಾಜ ನಂಬಾ, ರವಿ ಟರ್ಕೆರ್, ಮೌನೇಶ, ಮಹಾಂತೇಶ, ಗೌಸ ರಂಗಂಪೆಟ, ಚನ್ನಪ್ಪ, ನಿಂಗಪ್ಪ, ಶರಣು, ಮರೆಪ್ಪ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!