ವಚನ ಸಾಹಿತ್ಯ ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಪ್ರಮುಖವಾಗಿದೆ-ಪ್ರಶಾಂತ

ಸುರಪುರ: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ. ವಚನ ಎಂದರೆ ಪ್ರಮಾಣ, ಮಾತು ಎಂದರ್ಥ. ವಚನಗಳು ಚಿಕ್ಕ ಚಿಕ್ಕ ಗದ್ಯದ ತುಣುಕುಗಳಾಗಿದ್ದು, ಅನುಭಾವ ಮತ್ತು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎಂದು ಶ್ರೀ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಪ್ರಶಾಂತ ಸೇರಿಕಾರ ಮಾತನಾಡಿದರು.

ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಜರುಗಿದ ಶ್ರಾವಣ ಶ್ರವಣ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ,
ಬಸವಣ್ಣನವರು ವಚನ ಚಳುವಳಿಯ ಪ್ರಮುಖ ನಾಯಕರಾಗಿದ್ದರು. ಅವರು ಅನುಭವ ಮಂಟಪ ಎಂಬ ಸಭೆಯನ್ನು ಸ್ಥಾಪಿಸಿದರು, ಅಲ್ಲಿ ವಚನಕಾರರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ವಚನಗಳು ಮತ್ತು ಸಾಮಾಜಿಕ ಸುಧಾರಣಾ ಚಟುವಟಿಕೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿ ,
ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಕ್ರಾಂತಿಯು ಸಾಮಾಜಿಕ-ಧಾರ್ಮಿಕ ಚಳುವಳಿಯ ಒಂದು ಭಾಗವಾಗಿತ್ತು. ವಚನಗಳು ಸರಳ, ನೇರ ಮತ್ತು ಅರ್ಥಗರ್ಭಿತವಾಗಿದ್ದು, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಾಮಾನ್ಯ ಜನರೊಂದಿಗೆ ಸಂವಹನ ನಡೆಸಲು ಬಳಸಲಾಗುತ್ತಿತ್ತು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ತಿಮ್ಮಾಪುರ ಶರಣ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಿವರಾಜ ಕಲಕೇರಿ ಅವರು ಶಿವಾನುಭವ ಚಿಂತನೆಗಳು ಮನುಷ್ಯನ ಮನಸ್ಸನ್ನು ಶುದ್ದಿಕರಿಸುತ್ತೇವೆ ಎಂದು ಹೇಳಿದರು. ಆರಕ್ಷಕ ಉಪ ನಿರೀಕ್ಷಕ ಕೃಷ್ಣ ಸುಬೇದಾರ್ ಮಾತನಾಡಿ, ಮಠಮಾನ್ಯಗಳು ಜನರ ಬದುಕನ್ನು ಹಸನುಗೊಳಿಸುವ ಪುಣ್ಯ ಕ್ಷೇತ್ರಗಳಾಗಿವೆ. ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಜರುಗುವ ಶಿವಾನುಭವ ಚಿಂತನಗಳು ಶರಣ ಧರ್ಮವನ್ನ ಪಾಲಿಸುವುದರೊಂದಿಗೆ ಸಮಾಜೋದ್ಧಾರದ ಚಿಂತನೆಗಳಾಗಿವೆ ಎಂದರು.

ಪ್ರಾರಂಭದಲ್ಲಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಶ್ರೀ ಮಹಾಂತಯ್ಯ ಸ್ವಾಮಿ ವಸ್ತ್ರದಮಠ ಪೂಜೆ ಸಲ್ಲಿಸಿದರು.   ಸಂಗೀತ ಕಲಾವಿದರಾದ ಪ್ರಾಣೇಶರಾವ್ ಕುಲಕರ್ಣಿ, ಉಮೇಶ ಯಾದವ, ಸುರೇಶ ಅಂಬುರೆ, ರಮೇಶ ಕುಲಕರ್ಣಿ, ಜಗದೀಶ್ ಮಾನು, , ಗೋಪಾಲ್ ರಂಗಂಪೇಟ ಶರಣಬಸವ ಕೊಂಗಂಡಿಸಂಗೀತ ಸೇವೆ ಸಲ್ಲಿಸಿದರು.

ಕಲಾವಿದ ಮೋಹನರಾವ್ ಮಾಳದಕರ್ ಪ್ರಾರ್ಥನೆ ಗೀತೆ ನೆರವೇರಿಸಿದರು, ಸುರೇಶ ಅಂಬುರೆ ತಬಲಾ ಸಾಥ್ ನೀಡಿದರು. ಕ.ಸಾ.ಪ. ಗೌರವ ಕಾರ್ಯದರ್ಶಿ ಹೆಚ್ ವೈ ರಾಠೋಡ್ ನಿರೂಪಿಸಿದರು,ಉಪನ್ಯಾಸಕರಾದ ದೇವು ಎಸ್ ಹೆಬ್ಬಾಳ ಸ್ವಾಗತಿಸಿದರು, ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ ಹಾಗೂ ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ
ಮಂಗಲಗೀತೆ ಹಾಡಿದರು.

ಪ್ರಮುಖರಾದ ಭೀಮನಗೌಡ ಜೈನಾಪುರ, ಬಸವರಾಜ ಜಮದರಖಾನಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಮಹೇಶ ಹಳ್ಳದ, ಶಿವಶರಣಬಸವ ಪುರಾಣಿಕಮಠ. ಮಹೇಶ್ ಪತ್ತಾರ ಕಿರದಳ್ಳಿ. ಹಣಮಂತ್ರಾಯ ಯಾಳವಾರ, ಮಹೇಂದ್ರ ಅಂಗಡಿ ಕೋನಾಳ. ಸುಭಾಷ ಹೂಗಾರ್, ಮಾನಪ್ಪ ಹುಲಿಕಲ್, ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!