ಸುರಪುರ: ಜಗತ್ತಿನ ಎಲ್ಲಾ ಹುದ್ದೆಗಳಲ್ಲಿ ಶಿಕ್ಷಕನ ಹುದ್ದೆ ಅತ್ಯಂತ ಮಹತ್ವದ್ದು ಎಲ್ಲಾ ಸ್ಥಾನಗಳಿಗಂತೂ ಹೆಚ್ಚಿನದು ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು, ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಾಗೂ ಪಿಯುಸಿ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದು ಈ ದಿನವನ್ನು ವಿದ್ಯಾರ್ಥಿಗಳು ಭಕ್ತಿಯಿಂದ ಅಭಿಮಾನದಿಂದ ಗೌರವದಿಂದ ಆಚರಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನರವರು ಶಿಕ್ಷಕರಾಗಿ ಅಧ್ಯಪಕರಾಗಿ ತತ್ವಶಾಸ್ತ್ರದ ಮಹಾನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಈ ರಾಷ್ಟ್ರದ ರಾಷ್ಟ್ರಪತಿಗಳಾಗಿ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ, ಆದರೂ ಕೂಡ ಅವರು ಶಿಕ್ಷಕ ವೃತ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನ ಕೊಟ್ಟಿದ್ದರು ಎಂದು ಅಂಗಡಿ ಹೇಳಿದರು.
ಉಪನ್ಯಾಸಕ ಬಲಭೀಮ ಪಾಟೀಲ್ ಮಾತನಾಡಿದರು, ಕಾಲೇಜಿನ ಪ್ರಾಂಶುಪಾಲ ವೀರೇಶ ಹಳಿಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿರಾದ ರೋಹಿಣಿ ಸುರಪುರ, ಮೇಘಾ ದಾಯಿಪಿಲೆ. ಸವಿತಾ ಆವಂಟಿ ವೇದಿಕೆ ಮೇಲಿದ್ದರು.ಹಣುಮಂತರಾಯ ದೇವತ್ಕಲ್ ನಿರೂಪಿಸಿದರು. ನಿಂಗಮ್ಮ ಪ್ರಾರ್ಥಿಸಿದರು ಸೃಜನ ಜಗಶೆಟ್ಟಿ ಸ್ವಾಗತಿಸಿದರು ನಾಜಿಮ ವಂದಿಸಿದರು ಇದೇ ಸಂದರ್ಭದಲ್ಲಿ ಎಲ್ಲ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು,ನಂತರ ಪಿಯುಸಿ ಪ್ರಥಮ ಮತ್ತು ಬಿ.ಎ ಪ್ರಥಮ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಕಾಲೇಜಿಗೆ ಸ್ವಾಗತಿಸಲಾಯಿತು.