ಸುರಪುರ: ಶ್ರಾವಣ ಮಾಸದ ನಂತರದ ಮೊದಲ ಸೋಮವಾರ ನಡೆಯುವ ಲಕ್ಷ್ಮೀಪುರ -ಬಿಜಾಸಪುರ ಮಾರ್ಗ ಮಧ್ಯದ ಶ್ರೀ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಆಚರಿಸಲಾಯಿತು. ಜಾತ್ರೆಯ ಅಂಗವಾಗಿ ಆರೂಢ ಸ್ವಾಮಿ ಶ್ರೀಗಿರಿ ಮಠ ಅವರ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ವಿಶೇಷ ಪೂಜಾ ಅಲಂಕಾರ,ಬಿಲ್ವಾರ್ಚನೆ,ಅಭಿಷೇಕ ಹಾಗೂ ಭಕ್ತಾದಿಗಳಿಂದ ಕಾಯಿ ಕರ್ಪುರ ನೈವೇದ್ಯ ಅರ್ಪಿಸಿ ಭಕ್ತ ಸಮರ್ಪಿಸಿದರು.ಸಾಯಂಕಾಲ ನಡೆದ ರಥೋತ್ಸವ ಅಂಗವಾಗಿ ರಥಕ್ಕೆ ಹೂವಿನ ಅಲಂಕಾರಗೊಳಿಸಲಾಗಿತ್ತು. ಲಕ್ಷ್ಮೀಪುರ ,ಬಿಜಾಸಪುರ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹೂವು,ಹಣ್ಣು,ಉತ್ತತ್ತಿ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.ರಥೋತ್ಸವದ ಸಂದರ್ಭದಲ್ಲಿ ಭಕ್ತರ ಭ್ರಮರಾಂಭ ಮಲ್ಲಿಕಾರ್ಜುನ ದೇವರಿಗೆ ಜಯವಾಗಲಿ ಎನ್ನುವ ಘೋಷಣೆಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.ನಂತರ ರಾತ್ರಿಯಿಡೀ ವಿವಿಧ ಗ್ರಾಮಗಳ ಭಜನಾ ತಂಡಗಳಿAದ ಭಜನಾ ಕಾರ್ಯಕ್ರಮ ನಡೆಯಿತು.
ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ;ಅದ್ಧೂರಿ ರಥೋತ್ಸವ
