ಸುರಪುರ: ನಗರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾದ ಹಿಂದು ಮಹಾ ಗಣಪತಿ ಕಾರ್ಯಕ್ರಮದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಂದೋಲ ಆಗಮಿಸಿ ಗಣಪತಿ ದಶ೯ನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಪ್ರಥಮ ಬಾರಿಗೆ ಸುರಪುರದಲ್ಲಿ ಹಿಂದು ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ, ಮಹಾ ಗಣಪತಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಆಗಮಿಸಿದ್ದರಿಂದ ಹಿಂದು ಮಹಾ ಗಣಪತಿ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ನಾಯಕ,ಪಾರಪ್ಪ ಗುತ್ತೇದಾರ,ಭೀಮಣ್ಣ ಬೇವಿನಾಳ,ವಾಸುದೇವ ನಾಯಕ,ಶರಣು ನಾಯಕ ದಿವಳಗುಡ್ಡ, ಸಂಗನಗೌಡ ಕೋಳಿಹಾಳ,ಬಸವ ಶಾಸ್ತಿç ಕೋನ್ಹಾಳ, ಹಂಪಯ್ಯ ಸ್ವಾಮಿ ಬೋನ್ಹಾಳ,ಬಸವರಾಜ ಕವಡಿಮಟ್ಟಿ,ವಿಶ್ವ ಮಡಿವಾಳ,ಬಸನಗೌಡ ಸೂಗೂರ ಸೇರಿದಂತೆ ಸಮಿತಿಯ ಅನೇಕರು ಇದ್ದರು.
ಹಿಂದು ಮಹಾ ಗಣಪತಿ ದಶ೯ನ ಪಡೆದ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿಜೀ


