ಸುರಪುರ: ನಗರದ ಪೊಲೀಸ್ ಠಾಣೆಯ ಪೆದೆ ದಯಾನಂದ ಜಮಾದಾರ್, ಯುವ ರೈತ ನೊಬ್ಬ ರಸ್ತೆಯಲ್ಲಿ ಕಳೆದುಕೊಂಡಿದ್ದ ಹಣವನ್ನು ತನಗೆ ಸಿಕ್ಕಿದ್ದರಿಂದ ತಮ್ಮ ಪೊಲೀಸ್ ಹಿರಿಯ ಅಧಿಕಾರಿಗಳ ಮೂಲಕ ಕುಮಾರಸ್ವಾಮಿಗೆ ನೀಡುವ ಮೂಲಕ ಪೊಲೀಸ್ ಪೇದೆ ದಯಾನಂದ ಜಮಾದಾರ್ ಮಾನವೀಯ ಕಾರ್ಯ ಮೆರೆದಿದ್ದಾರೆ.
ಪೊಲೀಸ್ ಠಾಣೆಯ ಪಿ .ಐ ಉಮೇಶ್ ಎಂ ಆದೇಶದ ಮೇರೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಜಾಗೃತಿ ಪ್ರಯುಕ್ತ ದೇವಾಪುರ್ ಬಿಟ್ ಪೊಲೀಸ್ ದಯಾನಂದ್ ಬೈಕ್ ಮೂಲಕ ದೇವಪೂರ ಗ್ರಾಮಕ್ಕೆ ಹೋಗುವಾವಾಗ ಗಾಳಿ ಮರಗಮ್ಮ ದೇವಸ್ಥಾನದ ಬಳಿ ಹೆದ್ದಾರಿ ಮೇಲೆ ಕೇಸರಿ ಟವೇಲಿನಲ್ಲಿ ಕಟ್ಟಲಾಗಿದ್ದ 147410 ರೂಪಾಯಿ ಗಂಟು ರೋಡಿನ ಮೇಲೆ ಬಿದ್ದ ದುಡ್ಡನ್ನು ನೋಡಿ ತೆಗೆದುಕೊಂಡು ಠಾಣಾಧಿಕಾರಿ ಉಮೇಶ್ ಎಂ ರವರಿಗೆ ಮಾಹಿತಿ ತಿಳಿಸಿ,ಕೇಸರಿ ಶಾಲಿನಲ್ಲಿರುವ ದುಡ್ಡನ್ನು ಕಟ್ಟಿ ಅಲ್ಲೇ ನಿಂತು ಯಾರಾದರೂ ಕಳೆದುಕೊಂಡವರು ಬರುತ್ತಾರೆಂದು ಸ್ವಲ್ಪ ಸಮಯದ ವರೆಗೆ ಅಲ್ಲೇ ನಿಂತು ನೋಡುತ್ತಿರುವಾಗ ಗಾಬರಿಯಿಂದ ಒಬ್ಬ ಯುವಕ ಓಡೋಡಿ ಬಂದು ಸರ್, ಈ ದುಡ್ಡು ನಂದು ಕಳೆದುಕೊಂಡಿದ್ದೇನೆ ಬೆಳಗ್ಗೆ ಅರಳಹಳ್ಳಿ ಯಿಂದ ಹೊಲದಲ್ಲಿ ಬೆಳೆದ ಹತ್ತಿಯನ್ನು ಕುಂಬಾರಪೇಟ ಮಿಲ್ ನಲ್ಲಿ ಮಾರಿ ದುಡ್ಡು ತೆಗೆದುಕೊಂಡು ಟ್ಯಾಕ್ಟರ್ ನಲ್ಲಿ ಕೇಸರಿ ಶಾಲಿನಲ್ಲಿ ದುಡ್ಡನ್ನು ಕಟ್ಟಿಕೊಂಡು ಟ್ಯಾಕ್ಟರ್ ಟಾಪ್ ಬ್ಯಾಗಿನಲ್ಲಿ ಇಟ್ಟುಕೊಂಡು ಬರುತ್ತಿದ್ದಾಗ ಬಿದ್ದಿರುತ್ತವೆ ಸರ್ ಎಂದು ಯುವಕ ತಿಳಿಸಿದ್ದಾನೆ. ಗಾಬರಿಯಾಗಬೇಡ ಎಲ್ಲಾ ದುಡ್ಡು ಇಲ್ಲಿವೆ ಧೈರ್ಯವಾಗಿರು ನಮ್ಮ ಠಾಣೆಯ ಠಾಣಾಧಿಕಾರಿಗೆ ದುಡ್ಡು ಸಿಕ್ಕ ಬಗ್ಗೆ ಮಾಹಿತಿ ತಿಳಿಸಿದ್ದು ನಡಿ ಪೊಲೀಸ್ ಠಾಣೆಗೆ ಹೋಗಿ ನಮ್ಮ ಸಾಹೇಬರ ಮುಖಾಂತರ ನಿನ್ನ ದುಡ್ಡು ಕೊಡಲಾಗುತ್ತದೆ ಎಂದು ಠಾಣೆಗೆ ಕರೆದುಕೊಂಡು ಬಂದು ಹತ್ತಿ ಮಾರಾಟ ಮಾಡಿದ್ದರ ಬಗ್ಗೆ ಪರಿಶೀಲನೆ ಮಾಡಿ ಕಳೆದುಕೊಂಡ ವ್ಯಕ್ತಿ ಅರಳಳ್ಳಿ ಗ್ರಾಮದ ರೈತನಾಗಿದ್ದು ಗೌಡಪ್ಪಗೌಡ ತಂದೆ ರಾಮನಗೌಡ ಮಾಲಿಪಾಟೀಲ್ ಆಗಿದ್ದು ಅರಳಹಳ್ಳಿ ಗ್ರಾಮದವನೆಂದು ಗೊತ್ತಾದ ನಂತರ ಅದೇ ಗ್ರಾಮದ ವೆಂಕಟಪ್ಪ ನಾಯಕ್ ಜಾಗಿರದಾರ್ ಸಮ್ಮುಖದಲ್ಲಿ ಗೌಡಪ್ಪ ಗೌಡಗೆ ಮರಳಿ ಕೊಡಲಾಗಿದೆ.ಪೇದೆ ದಯಾನಂದ ಜಮಾದಾರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಪಿಎಸ್ಐ ಕೃಷ್ಣ ಸುಭೇದಾರ್, ಮುಖ್ಯಪೇದೆ ಸಣ್ಣಕೆಪ್ಪ ಟಣಿಕೆದಾರ್ , ಪೇದೆ ನಿಂಗಾರೆಡ್ಡಿ ನಾಯಕ್ ಹಾಗೂ ದಯಾನಂದ ಜಮಾದಾರ್ ಇದ್ದರು. ಪೊಲೀಸ್ ಪೇದೆ ಕಾರ್ಯಕ್ಕೆ ಉಮೇಶ್ ಎಂ. ಪಿ ಐ ಹಾಗೂ ಕೃಷ್ಣ ಸುಬೇದಾರ್ ಪಿಎಸ್ಐ ಸುರಪುರ ಪೊಲೀಸ್ ಠಾಣೆ ರವರು ಮೆಚ್ಚುಗೆ ವ್ಯಕ್ತಪಡಿಸಿದರು


