ಸುರಪುರ: ನಗರದ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ನ 2025 -28 ನೇ ಸಾಲಿನ ಮೂರು ವರ್ಷಗಳವರೆಗೆ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ ರಾಜಾ ಮುಕುಂದ ನಾಯಕ ಅವರ ಪ್ಯಾನೆಲ್ ನ ಒಟ್ಟು 7 ಜನ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಆಗಸ್ಟೀನ್ ಅವರು ತಿಳಿಸಿದ್ದಾರೆ.
ಇಲ್ಲಿಯ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಗೆ ಪ್ರಪ್ರಥಮ ಬಾರಿಗೆ ಭಾನುವಾರ ಕ್ಲಬ್ ನಲ್ಲಿ ನಡೆದ ಆಡಳಿತ ಮಂಡಳಿಯ ಒಟ್ಟು 7 ಜನ ನಿರ್ದೇಶಕರ ಚುನಾವಣೆ ನಡೆದಿದ್ದು ಚುನಾವಣೆಯ ಕಣದಲ್ಲಿ ರಾಜಾ ಮುಕುಂದ ನಾಯಕ ಅವರ ಪ್ಯಾನಲ್ ನಲ್ಲಿ ಅರವಿಂದಕುಮಾರ ರಫ್ ಗಾರ-58,
ಎಚ್.ಸಿ.ಪಾಟೀಲ-55, ಕಿಶೋರಚಂದ ಸಿ. ಜೈನ್55 ,ಮಂಜುನಾಥ ಬಿ. ಗುಳಗಿ-61 ರಾಜಾ ಮುಕುಂದ ನಾಯಕ-74 ಸುಭಾಷ ಎನ್. ಪಾಟೀಲ -62
ಸುರೇಶ ಆರ್.ಸಜ್ಜನ್-63 ರಫಗಾರ್,ಎಚ್.ಸಿ.ಪಾಟೀಲ್ ಸೇರಿ 7 ಜನ ಸದಸ್ಯರು ಹಾಗೂ ರಾಜಾ ಪಾಮ್ ನಾಯಕ ಅವರ ಪ್ಯಾನಲ್ ನಲ್ಲಿ ಒಟ್ಟು 4 ಜನ ಸದಸ್ಯರಾದ ಪ್ರಕಾಶ ಗುತ್ತೇದಾರ್-54, ರಾಕೇಶ್ ಹಂಚಾಟೆ-26, ರಾಜಶೇಖರ ಪಾಟೀಲ-43,ವಿ.ಕೆ.ನಾಯಕ-43 ಮತಗಳು ಪಡೆದರು.ಒಟ್ಟು 13 ಜನ ಸದಸ್ಯರು ಸ್ಪರ್ಧೆಯ ಕಣದಲ್ಲಿದ್ದರು.
ಮತದಾನ: ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಗೆ ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಒಟ್ಟು 95 ಸದಸ್ಯರಲ್ಲಿ 89 ಸದಸ್ಯರು
ಮತದಾನ ಮಾಡಿದರು.ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಿದರು. ಹರ್ಷ:ರಾಜಾ ಮುಕುಂದ ನಾಯಕ ಅವರ ಪ್ಯಾನಲ್ ಗೆಲುವು ಸಾಧಿಸುತ್ತಿದ್ದಂತೆ ಅವರ ಹಿತೈಷಿಗಳು,ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.