ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದ 1ರಿಂದ 12ನೇ ತರಗತಿಯ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ. ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಅವರು ಕೆಲ ಸಮಸ್ಯೆ ಎದುರಿಸುತ್ತಾರೆ. ಅವುಗಳ ನಿವಾರಣೆಗೆ ನಾವು ಮುಂದಾಗಬೇಕು ಹಾಗೂ ಎಲ್ಲರೂ ಈ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಸಮನ್ವಯ ಅಧಿಕಾರಿ ಪಂಡಿತ್ ನಿಂಬೂರ ಮಾತನಾಡಿ, ಪ್ರತಿ ವರ್ಷವೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ತಜ್ಞ ವೈದ್ಯರ ತಂಡವು ಮಕ್ಕಳಿಗೆ ಸೂಚಿಸುವ ಅಗತ್ಯವುಳ್ಳ ಸಾಧನ ಸಲಕರಣೆಗಳನ್ನು ಪೂರೈಸುವ ಕಾರ್ಯವು ಆದ್ಯತೆಯ ಮೇಲೆ ಯೋಜನೆಯ ಮಿತಿಗೆ ಒಳಪಟ್ಟು ನೀಡಲಾಗುತ್ತದೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ತಿಳಿಸಿದರು.
ಟಿಹೆಚ್‌ಓ ಡಾ.ಆರ್.ವಿ ನಾಯಕ ಭಾಗವಹಿಸಿ ಮಾತನಾಡಿದರು.ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿಶೇಷ ಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.ಕಾರ್ಯಕ್ರಮವನ್ನು ಪ್ರಾಂಶುಪಾಲ ಸೋಪಿಸಾಬ್ ಗುತ್ತೇದಾರ ಅವರು ಉದ್ಘಾಟಿಸಿದರು. ರಂಗಂಪೇಟೆಯ ಕೆಪಿಎಸ್ ಶಾಲೆ ಪ್ರಾಂಶುಪಾಲ ಭೀಮಣ್ಣ ಬೋಸಗಿ,ಎಂ ಆರ್ ಡಬ್ಲ್ಯೂ ಮಾಳಪ್ಪ, ಶ್ರವಣ ತಜ್ಞ ಡಾ. ವಿಜಯಕುಮಾರ, ನೇತ್ರ ತಜ್ಞ ಡಾ. ಅಬ್ದುಲ್ ಅಬಿ, ಓಂ ಪ್ರಕಾಶ್ ಕಣ್ಣೂರಮಠ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಬಿಐಆರ್‌ಟಿ ಗಳಾದ ಮಹಾದೇವಪ್ಪ ಗುತ್ತೇದಾರ, ರಾಜಶೇಖರ್ ದೇಸಾಯಿ, ಮಲ್ಲಿಕಾರ್ಜುನ, ಶಿಕ್ಷಕರುಗಳಾದ ದುರ್ಗಪ್ಪ, ಸಿದ್ದನಗೌಡ, ನಾಗರಾಜ್, ದತ್ತುರಾವ್ ಕುಲಕರ್ಣಿ, ಖಾಷಿಂಸಾಬ್, ಅಶೋಕ, ವಿಶೇಷ ಚೇತನ ಮಕ್ಕಳು, ಪೋಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲಕ್ಷ್ಮಣ ನಾಯಕ ನಿರೂಪಿಸಿದರು, ಬಾಬು ಮುತ್ತಗಿ ಸ್ವಾಗತಿಸಿದರು, ನಾಗರಾಜ ವಂದಿಸಿದರು.