ಸುರಪುರ:ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಕಾನೂನು ಜಾರಿಯಲ್ಲಿವೆ, ಮಹಿಳೆಯರು ಕಾನೂನಿನ ಅರಿವು ಪಡೆದು ಕೊಳ್ಳುವುದು ಅಗತ್ಯವಿದೆ ಎಂದು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಸುರಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಕಿರವ್ವ ಕೆಳಗೇರಿ ಅವರು ಹೇಳಿದರು. ರಂಗಂಪೇಟಿಯ ಕನ್ನಡ ಸಾಹಿತ್ಯ ಸಂಘದ 83ನೇ ವರ್ಷದ ನಾಡಹಬ್ಬ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದಲ್ಲಿ ಮಗು ಹುಟ್ಟಿನಿಂದ ಹಿಡಿದು ಸಾಯುವವರೆಗೂ ಎಲ್ಲದಕ್ಕೂ ಕಾನೂನುಗಳಿದ್ದು ಕಾನೂನಿನ ರಕ್ಷಣೆ ಎಲ್ಲರು ಪಡೆಯುವಂತೆ ತಿಳಿಸಿದರು.ಅಲ್ಲದೆ ಮಹಿಳಾ ಆಸ್ತಿ ಹಕ್ಕು ಮತ್ತು ಪೋಕ್ಸೋ ಕಾಯ್ದೆ ಕುರಿತು ತಿಳಿಸಿದರು. ಸುಗೂಣ ಸಪ್ಪಂಡಿಯವರು ಗೌರವ ಉಪಸ್ಥಿತರಿದ್ದರು.ಸಿದ್ದಮ್ಮ ಚಿಂತಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಸುವರ್ಣ ರಾಜಾ ವೆಂಕಪ್ಪ ನಾಯಕ (ವೈದ್ಯಕೀಯ), ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರಿ ಪ್ರಧಾನ ಗುರು ಮಂದಾಕಿನಿ ಚಿದಾನಂದ ರುದ್ರಸ್ವಾಮಿ ಮಠ(ಶಿಕ್ಷಣ), ಶಿಕ್ಷಕಿ ಬಸಮ್ಮ ಈರಣ್ಣ ಕುಂಬಾರ(ಸಂಗೀತ) ಹಾಗೂ ಸಾಹಿತಿ ಪಾರ್ವತಿ ದೇಸಾಯಿ ಕೆಂಭಾವಿ (ಸಾಹಿತಿ)ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಲ್ಪಾ ಎಂ. ಆವಂಟಿ ಸ್ವಾಗತಿಸಿದರು.ಸುನಂದಾ ಎಂ. ನಾಲವಾರ್ ನಿರೂಪಿಸಿದರು.ಪದ್ಮಾಕ್ಷೀ ಬಸ್ಸೆಟ್ಟಿ ವಂದಿಸಿದರು.ಮಹಿಳಾ ಘಟಕದವರಿಂದ ವಿಶೇಷವಾಗಿ ಮೊಬೈಲ್ ಫೋನ್ ಬಳಕೆಯಿಂದ ಕೆಟ್ಟ ಪರಿಣಾಮಗಳು ಬಿರುವ ಬಗ್ಗೆ ಕಿರುನಾಟಕ,ಕೋಲಾಟ,ಸೇರಿದಂತೆ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು.
ಕನ್ನಡ ಸಾಹಿತ್ಯ ಸಂಘದ ಮಹಿಳಾ ಸಂಘದ ಅಧ್ಯಕ್ಷೆ ಮಾಧುರಿ ವಿ. ಕಲಕುಂಡ,ರಾಜೇಶ್ವರಿ ಗೋಲಗೇರಿ,ಗೌತಮಿ ಬೋಡಾ,ಪಾರ್ವತಿ ಚೆಟ್ಟಿ,ಗೀತಾ ಶಾಬಾದಿ,ಸಂಜನಾ ಬೋಡಾ, ಜ್ಯೋತಿ ಶಾಬಾದಿ, ಸಿದ್ದಮ್ಮ ಶಾಬಾದಿ, ನಿರ್ಮಲಾ ವಾರದ್,ಸರಸ್ವತಿ ಮಿರಿಯಾಲ,
ನಾಗರತ್ನ ಪೊಲಂಪಲ್ಲಿ,ಲತಾ ತ್ರಿವೇದಿ, ಶೋಭಾಹಿರೇಮಠ, ಬಬಿತಾ,ವರ್ಷಾ ಗೆಜ್ಜೆಲ್, ಗಾಯತ್ರಿ ಮಿಠ್ಠಾ ಸೇರಿದಂತೆ ಇತರರು ಉಪಸ್ಥಿದರು.