ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಸುರಪುರ: ಪ್ರತಿ ವರ್ಷದಂತೆ ಈ ವರ್ಷವೂ ಸುರಪುರ ನಗರದ ಐತಿಹಾಸಿಕ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ 9 ದಿನಗಳ ಕಾಲ ನಿರಂತರ ಪೂಜೆ ಪ್ರಸಾದ ಭಜನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಪ್ರಸನ್ನ ವೆಂಕಟೇಶ್ವರ ದೇವರಿಗೆ ದೇವಸ್ಥಾನದ ಅರ್ಚಕರಾದ ಕೃಷ್ಣಚಾರ್ಯ ದೇವರು ಮತ್ತು ಭೀಮಶೇನಾಚಾರ್ಯ ದೇವರು ಇವರುಗಳ ನೇತೃತ್ವದಲ್ಲಿ ವಿಶೇಷ ಪೂಜಾ ಅಲಂಕಾರ ಯ,ಅಭಿಷೇಕ ತೀರ್ಥ ಪ್ರಸಾದ ವಿತರಣೆ ಮತ್ತು ಭಜನೆ ಕಾರ್ಯಕ್ರಮ ನಡೆಸಲಾಗಿದೆ. ಇಡೀ ದಿನ ಪ್ರಸಾದ ವಿತರಣೆ ಕಾರ್ಯಕ್ರಮದ ಅಂಗವಾಗಿ ಸುರಪುರ ನಗರದಾದ್ಯಂತ ನೂರಾರು ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಸ್ಥಾನಕ್ಕೆ ನಗರಸಭೆ ಉಪಾಧ್ಯಕ್ಷ ರಾಜ ಪಿಡ್ಡ ನಾಯಕ ಹಾಗೂ ಇತರೆ ಮುಖಂಡರು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಾಂತಪ್ಪ ಹೊಸೂರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.ದೇವಸ್ಥಾನದ ವತಿಯಿಂದ ಎಲ್ಲ ಮುಖಂಡರಿಗೆ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುರಾಜ ಅಗ್ನಿಹೋತ್ರಿ, ನಗರಸಭೆ ಸದಸ್ಯ ನರಸಿಂಹ ಕಾಂತ ಪಂಚಮಗಿರಿ, ಅನಂತ ಕೃಷ್ಣ, ಮಲ್ಲಾರಾವ್ ಸಿಂದಗೇರಿ, ಶ್ರೀನಿವಾಸ ಸಿಂದಗೇರಿ, ಕೃಷ್ಣಾ ಸಿಂದಗೇರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಪವನ್ ಕುಲಕರ್ಣಿ, ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಸನ್ನ ವೆಂಕಟೇಶ್ವರ ದೇವರ ಮೂರ್ತಿಗೆ ಬೆಳ್ಳಿಯ ಕವಚ ಮಾಡಿಸಲು ದೇವಸ್ಥಾನ ಸಮಿತಿಯಿಂದ ಸಂಕಲ್ಪ ಮಾಡಲಾಗಿದ್ದು, ದೇವಸ್ಥಾನದ ಭಕ್ತರು ದೇವರಿಗೆ ಬೆಳ್ಳಿಯ ಮೂರ್ತಿ ಮಾಡಿಸಲು ದೇಣಿಗೆಯನ್ನು ನೀಡುವವರು ಕಾಣಿಕೆ ಸಲ್ಲಿಸುವಂತೆ ಹಾಗೂ ಈಗಾಗಲೇ ಎರಡೂವರೆ ಕೆಜಿ ಬೆಳ್ಳಿಯನ್ನು ವಿವಿಧ ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದು,ಇನ್ನುಳಿದ ಬೆಳ್ಳಿಯನ್ನು ಎಲ್ಲ ಭಕ್ತರು ಸೇರಿ ದೇವರಿಗೆ ನೀಡುವ ಮೂಲಕ ಪ್ರಸನ್ನ ವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗೋಣ ಎಂದು ನಗರಸಭೆ ಸದಸ್ಯ ನರಸಿಂಹ ಕಾಂತ ಪಂಚಮಗಿರಿ ಭಕ್ತರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!