ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಪೌರ ಕಾರ್ಮಿಕರಿಗೆ ಕಮಿಷನರ್ ಬಸವರಾಜ ಸಲಹೆ

ಸುರಪುರ: ನಗರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ

ಸುರಪುರ:ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಪೌರ ಕಾರ್ಮಿಕರನ್ನು ಮಾಡದೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅವರನ್ನು ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಮಾಡಬೇಕು ಎಂದು ಪೌರಾಯುಕ್ತ ಬಸವರಾಜ ಟಣಕೆದಾರ ಅವರು ಕಿವಿಮಾತು ಹೇಳಿದರು.
ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕರ್ನಾಟಕ ರಾಜ್ಯ ನೌಕರರ ಸೇವಾ ಸಂಘ ಹಾಗೂ ಸುರಪುರ ನಗರಸಭೆ ಕಾರ್ಯಾಲಯದಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ ಅವರು ಮಾತನಾಡಿ,ನಗರದ ಪ್ರತಿಯೊಂದು ವಾರ್ಡಿನ ಗಲ್ಲಿ, ಗಲ್ಲಿಗಳಲ್ಲಿ, ಪ್ರಮುಖ ರಸ್ತೆಯಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದೆ.ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಾಂತಪ್ಪ ಹೊಸೂರು, ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ ಮಾತನಾಡಿದರು.ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹಮದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಸದಸ್ಯರಾದ ನಾಸೀರ್ ಕುಂಡಾಲೆ, ಮಾನಪ್ಪ ಚಳ್ಳಿಗಿಡ,ಖಮರುಲ್ ನಾರಾಯಣಪೇಠ, ಶಕೀಲ್ ಅಹಮದ್,ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪಂಪಣ್ಣ ಕಟ್ಟೀಮನಿ ಹಾಗೂ ಪೌರ ಕಾರ್ಮಿಕರ ಮಹಿಳಾ ಸಂಘದ ಅಧ್ಯಕ್ಷೆ ಶೀವಲೀಲಮ್ಮ ವೇದಿಕೆಯಲ್ಲಿದ್ದರು.ಜೆಇ ವಿಶ್ವನಾಥ್ ಯಾದವ, ಕಂದಾಯ ನಿರೀಕ್ಷಕ ವೆಂಕಟೇಶ ಕಲಬುರ್ಗಿ, ನೈರ್ಮಲ್ಯ ಅಧಿಕಾರಿಗಳಾದ ಗುರುಸ್ವಾಮಿ ಹಿರೇಮಠ ಮೈನುದ್ದೀನ್, ಹಣಮಂತ ಯಾದವ, ಸಿಬ್ಬಂದಿಗಳಾದ ಮಹಾದೇವ ರೆಡ್ಡಿ,ಖಂಡೆಪ್ಪ ಶಹಾಪುರ, ರತ್ನಮ್ಮ,ಸುರೇಖಾ ಕುಲಕರ್ಣಿ,ಅಂಜು,ದೀಪಾ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಾಜಶೇಖರ ಪಾಟೀಲ್ ಚಟ್ನಳ್ಳಿ, ಅಂಬರೀಶ್ ಡೊಣ್ಣಿಗೇರಿ, ಕಾಳಿಂಗ ಉಲ್ಪನ್ ವರ್, ದೇವಿಂದ್ರ ತೇಲ್ಕರ್, ಚಿರಂಜೀವಿ,ಕೃಷ್ಣಾ ,ಮರೆಪ್ಪ ಚೆಲುವಾದಿ, ಶರಣಪ್ಪ ಚೆಲುವಾದಿ, ನೀಲಮ್ಮ, ಸರಸ್ವತಿ,ಪದ್ದಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಮೇಲ್ವಿಚಾರಕ ರಾದ ಸುರಪುರದ ಮಲ್ಲಿಕಾರ್ಜುನ ಸುರಪುರಕರ್, ಹಸನಾಪುರದ ಶರಣಪ್ಪ ತೇಲ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸೋಮವಾರ ನಿಧನರಾದ ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಪೌರಾಯುಕ್ತ ದೇವೇಂದ್ರಪ್ಪ ಹೆಗ್ಗಡೆ ಅವರಿಗೆ ನಗರಸಭೆ ವತಿಯಿಂದ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

error: Content is protected !!