ಸ್ವಸಹಾಯ ಗುಂಪುಗಳಿಂದ ಮಹಿಳಾ ಸಬಲೀಕರಣ- ಸುನಂದ ನಾಲವಾರ

ಸುರಪುರ: ಸ್ವಸಹಾಯ ಗುಂಪುಗಳಿಂದ ಮಹಿಳಾ ಸಬಲೀಕರಣ ಸಾಧ್ಯವಿದೆ ಎಂದು ಸುರಕ್ಷಾ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುನಂದಾ ನಾಲವಾರ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಯಾದಗಿರಿ,ಸಹಕಾರ ಇಲಾಖೆ ಯಾದಗಿರಿ ಹಾಗೂ ಸುರಕ್ಷಾ ಮಹಿಳಾ ಸಹಕಾರ ಸಂಘ ರಂಗಂಪೇಟ ಇವರುಗಳ ಸಂಯುಕ್ತಾಕ್ಷರದಲ್ಲಿ ಮಹಿಳಾ ಸದಸ್ಯರ ಕ್ಲಸ್ಟರ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಹಕಾರ ಸಂಘಗಳು ಸಬಲೀಕರಣ ಹೊಂದುವುದು ಅವಶ್ಯಕತೆ ಇದೆ ಇಲಾಖೆಯಿಂದ ಸಿಗುವ ಸಾಲ ಸೌಲಭ್ಯಗಳ ಕುರಿತು ವ್ಯವಸ್ಥೆ, ಮುಂಜಾಗ್ರತ ಕ್ರಮಗಳು ತೆಗೆದುಕೊಂಡು ಎಲ್ಲರೂ ಆ ಸೌಲಭ್ಯಗಳನ್ನು ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಮುಂದಾಗ ಬೇಕೆಂದು ತಿಳಿಸಿದರು .

  ಶಮಾ ಮಹಾಗಾಂವ ವಾಲಿ ಸಂಘದ ನಿರ್ದೇಶಕಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿ ವೀಣಾ ಶಾಬಾದಿ ಇದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸರ್ವರನ್ನು ಸ್ವಾಗತಿಸಿ ಮಹಾಮಂಡಳ ಹಾಗೂ ಯೂನಿಯನ ಕಾರ್ಯ ಚಟುವಟಿಕೆಗಳ ಕುರಿತು ಸುಜಾತ ಮಠ ಜಿಲ್ಲಾ ಸಹಕಾರ ಶಿಕ್ಷಕರು ಯಾದಗಿರಿ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಉದ್ಯೋಗಿನಿ ಮತ್ತು ಸ್ವಸಹಾಯ ಸಂಘಗಳ ರಚನೆ ಗುಂಪುಗಳ ರಚನೆ ಸಾಲ ಸೌಲಭ್ಯಗಳ ಕೌಶಲ್ಯ ತರಬೇತಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಕುರಿತು, ಸ್ತ್ರೀ ಶಕ್ತಿಗಳ ಸ್ವಸಹಾಯ ಸಂಘ ರಚನೆ ಮಾಡಿ ಮಹಿಳೆಯರಿಗೆ ಸಾಲ ಸೌಲಭ್ಯ ಗಳ ನೀಡುವುದರ ಜೊತೆಗೆ ಕೌಶಲ್ಯ ತರಬೇತಿಗಳನ್ನು ನೀಡಿ ತರಬೇತಿಗಳನ್ನು ನೀಡುತ್ತಾರೆ ಹೆಣ್ಣು ಮಕ್ಕಳಿಗೆ ಇರುವ ಇಲಾಖೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಸ್ವಸಹಾಯ ಸಂಘಕ್ಕೆ ಒಂದು ಸಂಘಕ್ಕೆ ಮೊದಲ ಬಾರಿಗೆ ಒಂದುವರೆ ಲಕ್ಷ 9 ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿರುತ್ತಾರೆ ಸ್ವಯಂ ಉದ್ಯೋಗಿಗಳಿಗೆ ದಾರಿ ಮಾಡಿ ಕೊಟ್ಟಿರುತ್ತಾರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಯೋಜನೆಗಳ ಕುರಿತು ವಿವರವಾಗಿ ಸವಿತಾ ಪಾಲ್ಕೆ ತಾಲೂಕ ಕಾರ್ಯಕ್ರಮದ ವ್ಯವಸ್ಥಾಪಕರು ಸುರಪುರ ಇವರು ವಿಶೇಷವಾಗಿ ಉಪನ್ಯಾಸ ನೀಡಿದರು. ಅದರ ಜೊತೆಗೆ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.  ಕೊನೆಯಲ್ಲಿ ವಂದನಾರ್ಪಣೆ ಸಂಘದ ಕಾರ್ಯದರ್ಶಿಯಾದ ಮೌನೇಶ್ ನಾಲವಾರ್ ನೆರವೇರಿಸಿದರು.ಸಂಘದ ಅನೇಕ ಜನ ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!