ಕಾಲಕ್ಕೆ ತಕ್ಕಂತೆ ಕಾವ್ಯದ ಮಾರ್ಗ ಬದಲಾಗುತ್ತದೆ-ವಿಮರ್ಶಕ ವೆಂಕಟೇಶಗೌಡ

ಗಮಕ ಕಲಾ ಪರಿಷತ್ತು ಕನ್ನಡ ಸಾಹಿತ್ಯ ಸಂಘ : ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಸಮಾರಂಭ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಗಮಕ ಕಲಾ ಪರಿಷತ್ತು ಯಾದಗಿರಿ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ವಿಮರ್ಶಕ ಹಾಗೂ ಉಪನ್ಯಾಸಕ ವೆಂಕಟೇಶಗೌಡ ಪಾಟೀಲ ಮಾತನಾಡಿ,ಕಾಲಕ್ಕೆ ತಕ್ಕಂತೆ ಕಾವ್ಯದ ಮಾರ್ಗ ಬದಲಾಗುತ್ತದೆ. ಆಧುನಿಕ ಕಾವ್ಯದ ಹೊಳಹೋಗುಗಳನ್ನು ಅರಿಯಬೇಕು ಅಂದಾಗ ಉತ್ತಮವಾದ ಸಾಹಿತ್ಯ ಮೂಡಿ ಬರಲು ಸಾಧ್ಯವಾಗುತ್ತದೆ ಎಂದರು. ೨೧ನೇ ಶತಮಾನದಲ್ಲಿ ಯಾವ ಪಂಥಗಳಿಗಿAತ ಕಾವ್ಯ ರೂಪಾತ್ಮಕವಾಗಿ ಮಾತಾಡಬೇಕು. ಕಾವ್ಯದ ಶರೀರ ಛಂದಸ್ಸು ಅದರ ಅಧ್ಯಯನ ಕವಿ ಮಾಡಬೇಕು. ಕವಿತೆ ಒಮ್ಮೆಲೇ ರೂಪಗೊಳ್ಳುವುದಿಲ್ಲ. ಕವಿತೆ ಬರೆದಾದ ಮೇಲೆ ತಿದ್ದಿ ಬರೆಯಬೇಕು. ಅದನ್ನು ಮರು ಕಟ್ಟಬೇಕು. ಗಟ್ಟಿ ಮಾನವೀಯ ಆಶಯವಿಲ್ಲದ ಕವಿತೆ ಯಶಸ್ಸು ಕಾಣಲಾರದು ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು ಕಾವ್ಯದ ಅಸಲಿಯತ್ತನ್ನು ಓದುಗರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮಲ್ಲಣ್ಣ ಕೋಳೂರಗಿ, ಸಾಹೇಬರೆಡ್ಡಿ ಇಟಗಿ, ನೂತನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ನಾಮನಿರ್ದೇಶಿತ ಸದಸ್ಯ ಜಾವೇದ ಹವಾಲದಾರ, ನೂತನ ನಾಮ ನಿರ್ದೇಶಿತ ನಗರಸಭೆ ಸದಸ್ಯ ಪ್ರಕಾಶ ಅಲಬನೂರ,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪತ್ರಕರ್ತ ರಾಜು ಕುಂಬಾರ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಸಾಹಿತಿ ಪ್ರಕಾಶಚಂದ ಜೈನ್, ವಕೀಲ ಯಲ್ಲಪ್ಪ ಹುಲಕಲ್, ಗೃಹರಕ್ಷಕ ಕಮಾಂಡೆAಟ್ ವೆಂಕಟೇಶ ಸುರಪುರ, ಮಹೇಂದ್ರ ಅಂಗಡಿ, ಚಂದ್ರಕಾAತ ಮಾರ್ಗೆಲ್, ಪ್ರಕಾಶ ಬಣಗಾರ,ಶರಣಬಸವ ಹೂಗಾರ,ಮಹೇಂದ್ರ ಕೋನಾಳ,ಬಾಬು ಸೇರಿದಂತೆ ಇತರರಿದ್ದರು.

ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ನಬಿಲಾಲ ಮಕಾನದಾರ, ಶರಣಗೌಡ ಜೈನಾಪುರ, ಪತ್ರಕರ್ತ ರಾಜು ಕುಂಬಾರ, ಮಲ್ಲಿಕಾರ್ಜುನ ಉದ್ದಾರ, ಶÀರಣಬಸಪ್ಪ ಯಾಳವಾರ, ದೇವು ಹೆಬ್ಬಾಳ, ಎಚ್. ರಾಠೋಡ, ಶ್ರೀನಿವಾಸ ಜಾಲವಾದಿ, ಕನಕಪ್ಪ ವಾಗಣಗೇರಿ,ಜಾವೇದ್ ಹವಾಲ್ದಾರ್,ಪ್ರಕಾಶ ಅಲಬನೂರ ಇತರರು ಸ್ವರಚಿತ ಕವಿತೆ ವಾಚಿಸಿದರು.

Leave a Reply

Your email address will not be published. Required fields are marked *

error: Content is protected !!