ಸುರಪುರ: ಚಿಕ್ಕ ಮಕ್ಕಳು,ಗರ್ಭೀಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಟಿಕತೆ ಮತ್ತು ರಕ್ಷಹೀನತೆ ತಡೆಯಲು ಕಾರ್ಯಕರ್ತೆಯರು ನಿರಂತರವಾಗಿಗಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ತಿಪ್ಪಣ್ಣ ಶಿರಸಗಿ ಅವರು ತಿಳಿಸಿದರು.
ನಗರದ ರಂಗಂಪೇಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ತಾಲೂಕ ಆಡಳಿತ, ತಾಲೂಕು ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಪೋಷಣಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಲು ಅಂಗನವಾಡಿ ಕಾರ್ಯಕರ್ತರು ಮನವರಿಕೆ ಮಾಡಬೇಕು. ಜೊತೆಗೆ ಪ್ರತಿ ಗರ್ಭಿಣಿಯರಿಗೂ ಪರೀಕ್ಷೆ ನಡೆಸಿ, ೧೦ ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಇರುವ ಮಹಿಳೆಯರಿಗೆ ಆರೋಗ್ಯದ ಅರಿವು ಮೂಡಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್ ಸಾಬ್ ಪೀರಾಪುರ ಅವರು ಪ್ರಾಸ್ತಾವಿಕ ಮಾತನಾಡಿ, ಬಾಲ್ಯ ವಿವಾಹದಿಂದ ಮಾನಸಿಕ , ದೈಹಿಕ ಸದೃಢವಾಗಿ ರಕ್ತ ಹೀನತೆಯಿಂದಾಗಿ ಬಾಣಂತಿಯರು ಮರಣಹೊಂದುವ ಸಾಧ್ಯತೆಯಿದೆ.ಬಾಲ್ಯ ವಿವಾಹ ಮಾಡುವುದು ಕಾನೂನು ಬಾಹಿರವಾಗಿದ್ದಲ್ಲದೇ ಮಹಾ ಅಪರಾಧವಾಗಿದೆ.ಬಾಲ್ಯ ವಿವಾಹ ಮಾಡಿದ ತಂದೆ-ತಾಯಿ ಹಾಗೂ ಅವರ ಜೊತೆ ಕೈ ಜೋಡಿಸಿದವರ ವಿರುದ್ಧ ಪೋಕ್ಸೊ ಕಾಯಿದೆ ಅಡಿಯಲ್ಲಿ ಜೈಲಿಗೆ ಹೋಗಬೇಕಾಗುತ್ತದೆ.ಈಗಾಗಲೇ ಕಾರ್ಯಕರ್ತೆಯರು ಬಾಲ್ಯ ವಿವಾಹದ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆದಿದೆ ಆದರೂ ಅವರ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ಮಾಡಲು ಮುಂದಾದರೆ ಅಕ್ಕ-ಪಕ್ಕದವರು ಸ್ಥಳೀಯರು ಸಹಕಾರ ನೀಡಿದಾಗ ಮಾತ್ರ ಬಾಲ್ಯ ವಿವಾಹ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ, ಆರೋಗ್ಯ ಶಿಕ್ಷಣಾಧಿಕಾರಿ ನಿಂಗಮ್ಮ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ೪ ಜನ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಸನ, ಹಾಗೂ ಇಬ್ಬರು ಮಕ್ಕಳ ಜನ್ಮದಿನ ಆಚರಿಸಲಾಯಿತು ಹಾಗೂ ಮಕ್ಕಳ, ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹಮದ್, ಸದಸ್ಯ ನಾಸೀರ್ ಕುಂಡಾಲೆ, ನಗರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಗಫಾರ್ ನಗನೂರಿ,ಬಿಆರ್ ಪಿ ಖಾದರ್ ಪಟೇಲ್, ಯಲ್ಲಪ್ಪ, ಆರೋಗ್ಯ ನಿರೀಕ್ಷಕ ಸುರೇಶ್ ಖಾದಿ, ಶಕೀಲ್ ಅಹಮದ್ ವೇದಿಕೆಯಲ್ಲಿದ್ದರು.ಕವಿತಾ ಬಡಿಗೇರಾ ಪ್ರಾರ್ಥನೆ ಗೀತೆ ಹಾಡಿದರು.ಸಿದ್ದಮ್ಮ ಜಾನಕಿ ಸ್ವಾಗತಿಸಿದರು.ಸಾವಿತ್ರಿ ಗಾಳಿ ನಿರೂಪಿಸಿದರು. ಶಶಿಕಲಾ ಗಾಳಿ ವಂದಿಸಿದರು.ಮೇಲ್ವಿಚಾರಿಕೀಯರಾದ ಪದ್ಮಾ ಡಿ.ನಾಯಕ,ಚಂದ್ರಲೀಲಾ ನಿಂಬೂರ,ಸತ್ಯಮ್ಮ,ಸುನೀತಾ,ಡಿ.ಎಚ್.ಭಾಗಮ್ಮ ,ಶಾಂತಾ ಯಡ್ರಾಮಿ, ಭೀಮಾಶಂಕರ ನಾಯಕ,ಏಜಾಹೈಮದ್,ಹರೀಶ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಉಪಸ್ಥಿತರಿದ್ದರು.