ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಸುರಪುರ: ೨೦೨೪-೨೫ನೇ ಸಾಲಿಗೆ ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ೭೨೦೪೨೩೬ ರೂಪಾಯಿಗಳ ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಚ್.ಸಿ ಪಾಟೀಲ್ ಸಭೆಗೆ ತಿಳಿಸಿದರು. ನಗರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಒಂದು ಸಹಕಾರ ಸಂಘದ ಬೆಳವಣಿಗೆಗೆ ಎಲ್ಲ ಶೇರುದಾರರು ಮತ್ತು ಸಾಲಗಾರರ ಸಹಕಾರ ತುಂಬಾ ಮುಖ್ಯವಾಗಿದ್ದು,ಅದರಂತೆ ನಮ್ಮೆಲ್ಲ ಶೇರುದಾರರು ಹಾಗೂ ಸಹಕಾರ ಸಂಘದಲ್ಲಿ ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ್ದರಿಂದ ಉತ್ತಮ ಆದಾಯ ಬರಲು ಕಾರಣವಾಗಿದ್ದು ಎಲ್ಲ ಶೇರುದಾರರು ಮತ್ತು ಸಾಲಗಾರರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ್ ಸಜ್ಜನ್ ಮಾತನಾಡಿ, ಬಸವೇಶ್ವರ ಪತ್ತಿನ ಸಹಕಾರ ಸಂಘ ಕಳೆದ ೩೦ ವರ್ಷಗಳಿಂದ ಉತ್ತಮ ಸೇವೆ ನೀಡುತ್ತಾ ಬರುತ್ತಿದ್ದು, ಮುಂದೆಯೂ ಕೂಡ ಸಂಘದ ಹಲವು ಶಾಖೆಗಳನ್ನು ಆರಂಭಿಸುವ ಗುರಿ ಹೊಂದಿದ್ದು, ಸಂಘದ ಏಳಿಗೆಗೆ ಸದ್ಯ ಇರುವ ಕೇಂದ್ರ ಶಾಖೆ ಜೊತೆಗೆ ನಾಲ್ಕು ಶಾಖೆಗಳಿಂದಲೂ ಉತ್ತಮ ಆದಾಯ ಬರುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು. ೭೨ ಲಕ್ಷಕ್ಕಿಂತ ಹೆಚ್ಚಿನ ನಿವ್ವಳ ಲಾಭದಲ್ಲಿ ಶೇ ೨೫ ರಷ್ಟು ಅಂದರೆ ೨೨,೩೧,೩೫೩ ರೂಪಾಯಿಗಳ ಲಾಭದ ಹಣವನ್ನು ಶೇರುದಾರರಿಗೆ ನಗದು ಅಥವಾ ಹೆಚ್ಚುವರಿ ಶೇರು ಪ್ರಮಾಣ ಪತ್ರದ ಮೂಲಕ ನೀಡಬೇಕೆಂದು ಸರ್ವ ಸದಸ್ಯರ ಮೂಲಕ ಸರ್ವಾನುಮತದ ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ ಅಂಗಡಿ ಕನ್ನೆಳ್ಳಿ ಮಹಾಸಭೆಯ ಕುರಿತು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವೇಶ್ವರ ಹಾಗೂ ಸಹಕಾರಿ ಧುರಿಣ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ವೀರೇಶ ನಿಷ್ಠಿ ದೇಶಮುಖ ನಿರ್ದೇಶಕರಾದ ರವೀಂದ್ರ ಅಂಗಡಿ, ವಿಜಯಕುಮಾರ ಬಂಡೊಳಿ, ಮಲ್ಲಿಕಾರ್ಜುನ ಜಾಲಹಳ್ಳಿ, ಜಯಲಲಿತಾ ಪಾಟೀಲ,ನೀಲಮ್ಮ. ಆರ್ ಕುಂಬಾರ, ವೀರಭದ್ರಪ್ಪ ಕೆಂಭಾವಿ, ಮಂಜುನಾಥ ಜಾಲಹಳ್ಳಿ, ಕೃಷ್ಣಾರೆಡ್ಡಿ ಮುದನೂರ, ವೀರೇಶ ಪಂಚಾAಗ ಮಠ, ನಾಮನಿರ್ದೇಶತರಾದ ವಿಶ್ವರಾಧ್ಯ ಸತ್ಯಂಪೇಟೆ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲೆಪ್ಪನವರ ಮಠ, ಪ್ರಶಾಂತ ಹಿರೇಮಠ,ಸಿದ್ದನಗೌಡ ಹೆಬ್ಬಾಳ, ಕಾನೂನು ಸಲಹೆಗಾರ ರಾಮನಗೌಡ ಸುಬೇದಾರ, ಕೇಂದ್ರ ಕಚೇರಿ ಉಪ ಸಮಿತಿ ಅಧ್ಯಕ್ಷ ಶಿವಶರಣಪ್ಪ ಹೆಡಗಿನಾಳ, ಸಂಗನಬಸಪ್ಪ ಪಾಟೀಲ, ವಸಂತಕುಮಾರ ಬಣಗಾರ, ಶರಣಬಸವ ಹೂಗಾರ, ಶರಣಪ್ಪ ಎಂ ಮುಧೋಳ, ಹುಣಸಗಿ ಶಾಖೆ ಉಪಸಮಿತಿ ಅಧ್ಯಕ್ಷ ಹೊನ್ನಪ್ಪ ದೇಸಾಯಿ, ಆನಂದ ಬಾರಿಗಿಡದ, ಬಸವರಾಜ ವೈಲಿ, ಕೆಂಭಾವಿ ಶಾಖೆ ಉಪಸಮಿತಿ ಅಧ್ಯಕ್ಷ ಡಿ.ಸಿ ಪಾಟೀಲ, ಆದಿತ್ಯ ಪೊಲೀಸ್ ಪಾಟೀಲ, ಮಧು ಬಂದೆ,ಕಕ್ಕೇರಾ ಶಾಖೆ ಉಪ ಸಮಿತಿ ಅಧ್ಯಕ್ಷ ಚಂದ್ರಕಾAತ ಸಕ್ರಿ, ಜಗದೇವಪ್ಪ ಶಿವಪೂಜಿ, ನಾಗಪ್ಪ ಮಡಿವಾಳ, ಮಲ್ಲಿಕಾರ್ಜುನ ಬೇವಿನಾಳ, ಕೊಡೆಕಲ್ ಉಪ ಶಾಖೆ ಉಪ ಸಮಿತಿ ಅಧ್ಯಕ್ಷ ಶಂಕರಗೌಡ ಜೇವರ್ಗಿ, ಅಮರಪ್ಪ ಸಜ್ಜನ್, ಮಲ್ಲಣ್ಣ ಶೃಂಗೇರಿ, ಸಂಗಮೇಶ ಹೂಗಾರ, ಶಿವಪುತ್ರಪ್ಪ ಗೆದ್ದಲಮರಿ ಸೇರಿದಂತೆ ಕೇಂದ್ರ ಕಚೇರಿ ಮುಖ್ಯ ಕಾರ್ಯನಿರ್ವಕ ಅಧಿಕಾರಿ ಶರಣಗೌಡ ದೇಸಾಯಿ ಕಿರದಳ್ಳಿ, ಪ್ರಧಾನ ವ್ಯವಸ್ಥಾಪಕರಾದ ಅನ್ನಪೂರ್ಣ ಜಕರೆಡ್ಡಿ ಸೇರಿದಂತೆ ಎಲ್ಲಾ ಶಾಖೆಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ನೂರಾರು ಜನ ಶೇರುದಾರರು ಭಾಗವಹಿಸಿದ್ದರು.