ಭಾರತ ಮಾತೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ-ರಾಜುಗೌಡ
ಸುರಪುರ: ಭಾರತ ಮಾತೆಗೆ ಎಲ್ಲರು ಹೆತ್ತ ತಾಯಿಗೆ ನೀಡುವ ಗೌರವವನ್ನು ನೀಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.
ನಗರದ ಬಿಜೆಪಿ ಕಚೇರಿ ಆವರಣದಲ್ಲಿ ತಿರಂಗಾ ಯಾತ್ರೆ ಭಾಗವಹಿಸಿ ಅವರು ಮಾತನಾಡಿದರು,ಬಿಜೆಪಿ ಪಕ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಿದೆ. ದೇಶದಾದ್ಯಂತ ತಿರಂಗಾ ಯಾತ್ರೆಗಾಗಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದು,ಇಂದು ನಡೆದ ತಿರಂಗಾ ಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಹಾಗೂ ನಾಳೆಯಿಂದ ಮೂರು ದಿನಗಳ ಕಾಲ ಎಲ್ಲರೂ ನಿಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಒಂದು ಸೆಲ್ಫಿ ಹಾಕುವಂತೆ ತಿಳಿಸಿದರು.
ಇದಕ್ಕೂ ಮುನ್ನ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ ದಿಂದ ತಿಮ್ಮಾಪುರ,ರಂಗಂಪೇಟೆ ದೊಡ್ಡ ಬಜಾರ,ಸುರಪುರ ಮಹಾತ್ಮ ಗಾಂಧಿ ವೃತ್ತ,ದರಬಾರ ರಸ್ತೆ,ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ,ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಬಿಜೆಪಿ ಕಚೇರಿ ವರೆಗೆ ತಿರಂಗಾ ಯಾತ್ರೆ ಅಂಗವಾಗಿ ಬೈಕ್ ರ‍್ಯಾಲಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮೇಲಪ್ಪ ಗುಳಗಿ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.