ಶಹಾಪುರ : ಯಾದಗಿರಿ ಜಿಲ್ಲಾ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಕನ್ನಡ ಪ್ರಭ ಪತ್ರಿಕೆಯ ಜಿಲ್ಲಾ ಛಾಯಾಗ್ರಾಹಕ ಮಂಜು ಬಿರಾದಾರ್ ಅವರಿಗೆ ನಗರದ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಮಂಜು ಬಿರಾದಾರವರಿಗೆ ಸನ್ಮಾನ ಮಾಡಲಾಯಿತು.
ಆಡಳಿತ ಮಂಡಳಿಯ ಆಡಳಿತಾಧಿಕಾರಿ ಸಿ ಎಂ ಕಟ್ಟಿಮನಿ ಅವರು ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿ ಒಂದು ಚಿತ್ರ ನೂರು ಕಥೆ ಹೇಳುವುದು ಚಿತ್ರಗಳಿಲ್ಲದೆ ಯಾವುದೇ ಸುದ್ದಿ ಬಿತ್ತರಿಸಲು ಕಷ್ಟ ಸಾಧ್ಯ ಅಂತಹ ಮಹತ್ವದ ಕಾರ್ಯ ನಿಭಾಸುವ ಮಂಜು ಅವರು ನಮ್ಮ ಜಿಲ್ಲೆಯಲ್ಲಯೇ ಅತ್ಯುತ್ತಮ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಯಾವುದೇ ಕಾರ್ಯಕ್ರಮವಾಗಲಿ ನಗರ ಸೇರಿದಂತೆ ಯಾದಗಿರಿಯಲ್ಲಿಯೂ ಕೂಡಾ ಹಾಜರಾಗಿ ಉತ್ತಮ ಚಿತ್ರೀಕರಣ ಮಾಡಿ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ ಸರ್ವರಿಗೂ ಸುದ್ದಿ ಪ್ರಸಾರ ಮಾಡಲು ಫೋಟೋಗಳನ್ನು ರವಾನೆ ಮಾಡುವದು ಇವರ ಮನೋಭಾವನೆ ಎಂದರು.
ಆದ್ದರಿಂದ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪ್ರಸಂಸೆ ಬಿರಾದಾರ್ ಅವರಿಗೆ ವ್ಯಕ್ತವಾಗಿರುವುದು ಸಂತಸದ ವಿಷಯ ಎನ್ನುವರು.