ಶಹಾಪುರ :- ವಿದ್ಯಾರ್ಥಿಗಳ ಸಾಧನೆ ಮತ್ತು ಬೆಳವಣಿಗೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಶಿಕ್ಷಕರು ದೇಶದ ನಿರ್ಮಾತ್ರುಗಳು ಜೀವನದಲ್ಲಿ ನಾವು ಎಷ್ಟು ಹಣ ಗಳಿಸಬಹುದು. ಆದರೆ ಅಕ್ಷರ ಜ್ಞಾನ ಯಾರಿಂದಲೂ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಣ ಗಳಿಸಿದರೆ ಬೇರೆಯವರು ಕಸಿದುಕೊಳ್ಳಬಹುದು ಆದರೆ ವಿದ್ಯೆ ಎಂಬುದು ಮಹದೊಡ್ಡ ಶಕ್ತಿ ಇದನ್ನು ಯಾರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಯುವ ಮುಖಂಡರಾದ ಬಸ್ಸುಗೌಡ ಕಂಚನಕವಿ ಹೇಳಿದರು.
ಶಹಾಪುರ ಹೃದಯಭಾಗದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರತಿ ವ್ಯಕ್ತಿಯ ಬದುಕಿನ ದಾರಿದೀಪವಾಗಿ ಶಿಕ್ಷಕರು ನಿಲ್ಲುತ್ತಾರೆ ಮಾಜಿ ರಾಷ್ಟ್ರಪತಿಗಳು ಹಾಗೂ ಬಹು ಭಾಷಾ ಪಂಡಿತರು ಉತ್ತಮ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣರು ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ತೀರ್ಮಾನಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರು .ಪ್ರತಿ ಮಗು ಬೆಳೆದು ಸಮಾಜದಲ್ಲಿ ಏನೆಲ್ಲ ಮಹತ್ತರ ಸಾಧನೆಗಳನ್ನು ಮಾಡುತ್ತದೆಯೊ ಅದೆಲ್ಲಕ್ಕೂ ಪ್ರತೆಕ್ಷವಾಗಿ ಪರೂಕ್ಷವಾಗಿ ಶಿಕ್ಷಕರ ಸಹಕಾರ ಶ್ರಮ ಬೆಂಬಲ ಇರುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವ ಸಹೃದಯಿಗಳು ಎಂದರು ವಿದ್ಯಾರ್ಥಿಗಳು ಶಿಕ್ಷಕರ ಸಂಬಂಧ ಅತ್ಯಂತ ಪವಿತ್ರವಾದದ್ದು ವಿದ್ಯಾರ್ಥಿಗಳು ಮಹಾನ್ ಸಾಧಕರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸ್ಸುಗೌಡ ಕಂಚನಕವಿ ಮಕ್ಕಳಿಗೆ ಕಿವಿಮಾತು ಹೇಳಿದರು ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆಂಭಾವಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ್, ಮಾತನಾಡುತ್ತಾ ಇವತ್ತಿನ ದಿನಗಳಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಗೌರವ ಕಡಿಮೆಯಾಗುತ್ತಿದೆ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯ ಇದೆ ಅದಕ್ಕೆ ವಿದ್ಯಾರ್ಥಿಗಳಿಗೆ ಉತ್ತಮವಾದ ಸಂಸ್ಕಾರ ನೀಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ ನಾಲ್ಕು ಅಕ್ಷರಗಳು ಕಡಿಮೆ ಕಲಿತರು ಪರವಾಗಿಲ್ಲ ಸಂಸ್ಕಾರದಲ್ಲಿ ಯಾವತ್ತೂ ಹಿಂದುಳಿಯಬಾರದು ಎಂದು ಹೇಳಿದರು. .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣು ನಾಯ್ಕಲ್ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಕಠಿಣವಾದ ಪರಿಶ್ರಮ ಅಗತ್ಯವಿದೆ ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸತತವಾದ ಅಧ್ಯಯನದ ಕಡೆ ಗಮನ ಹರಿಸಬೇಕು ಮತ್ತು ತಂದೆ-ತಾಯಿಗಳ ಆಸೆಗಳನ್ನು ಈಡೇರಿಸಬೇಕು ಆ ನಿಟ್ಟಿನಲ್ಲಿ ಕಠಿಣವಾದ ಪರಿಶ್ರಮ ಅಗತ್ಯವಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಶಿಕ್ಷಕರಿಗೆ ಪುಸ್ತಕ ಮತ್ತು ಸಸಿಗಳನ್ನು ನೀಡಿ ಶುಭ ಕೋರಿದರು..ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸುಭಾಷ್ ನಾಯಕ್.ನಿಲಯ ಪಾಲುಕರಾದ ಸಂತೋಷ ಜೋಗೂರ, ಮಲ್ಲಿಕಾರ್ಜುನ ಮಳಿಕೇರಿ, ಬಸವರಾಜ, ಚಂದ್ರು ರಾಠೋಡ, ರಾಜಕುಮಾರ ಬಡಿಗೇರ್, ಭಾಗ್ಯಮ್ಮ ಪಾಟೀಲ್, ವಿದ್ಯಾ ಬಿರಾದಾರ, ದೀಪಾ ದೊಡ್ಡ ಮನಿ, ಶಕುಂತಲಾ ಸುರಪುರ, ಸೌಮ್ಯ ಕುಲಕರ್ಣಿ, ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು