ಡಿಸಿ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಡಿ. ವಿರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಡಿಸಿ ಕಚೇರಿ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಾಜಕುಮಾರ ಪಾಟೀಲ್ ತೆಲ್ಯೂರ್, ನಿತೀನ್ ಗುತ್ತೇದಾರ, ರವಿ ಬಿರಾದಾರ, ಸದಾನಂದ ಪೆರ್ಲಾ, ರವಿ ಮದನಕರ್, ಮಲ್ಲಿಕಾರ್ಜುನ ಸಾರವಾಡ, ಎಂ.ಎಸ್. ಪಾಟೀಲ್ ನರಿಬೋಳ, ನಾಗಲಿಂಗಯ್ಯಾ ಮಠಪತಿ, ಲಕ್ಷ್ಮೀಕಾಂತ ಸ್ವಾದಿ ಸೇರಿದಂತೆ ಇನ್ನಿತರರಿದ್ದರು.