ಕಂದಕೂರನಲ್ಲಿ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ

ಗುರುಮಠಕಲ್: ಭಾರತ ಸಕಾ೯ರದ ಬಹುಮುಖ್ಯವಾದ ಮತ್ತು ವಿಶೇಷವಾದ ಮಹಿಳೆಯರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿರವರು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕಂದಕೂರ ನಲ್ಲಿ ಹಮ್ಮಿಕೊಂಡಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಉದ್ಘಾಟನೆ ಕರ‍್ಯಕ್ರಮ ಅಂಗವಾಗಿ ಮಾತನಾಡಿದ ಶ್ರೀಮತಿ ಶಂಕರಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಅಭಿಯಾನವು ಮಹಿಳಾ ಸಂಕುಲನಕ್ಕೆ ವರದಾನ ಆಗಿದೆ ಎಂದು ಸಾವ೯ಜನಿಕರು ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು…

Read More

ಹಿಂದೂಗಳ ರಕ್ಷಣೆಗೆ ಶಿವಸೇನಾ ಸದಾ ಸಿದ್ದ : ಆಂದೋಲ ಶ್ರೀ

ಜೇವರ್ಗಿ  : ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಇದ್ದರೆ ರಾಜ್ಯದಲ್ಲಿ ಹಿಂದೂಗಳ ರಕ್ಷಣೆಗೆ ಶಿವಸೇನಾ ಇದೆ ಎಂದು ಶಿವಸೇನಾ ರಾಜ್ಯಧ್ಯಕ್ಷ ಸಿದ್ಧಲಿಂಗ ಸ್ವಾಮಿಜಿ ಹೇಳಿದರು. ಪಟ್ಟಣದ ಬಸವೇಶ್ವರ ವೃತದಲ್ಲಿ ಶಿವಸೇನಾ ಹಿಂದೂ ಮಹಾ ಗಣಪತಿಯ ೨೨ ನೇ ದಿನದ ವಿಸರ್ಜನ ಹಾಗೂ ಶೋಭಾಯಾತ್ರೆಯ ವೇಧಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಕಾನೂನು ನಡೆಯುತ್ತದೆ ಹೊರತು ಕಾಂಗ್ರೆಸ್ ನಾಯಕರ ಕಾನೂನು ಮೇಲೆ ಅಲ್ಲ. ಹಿಂದೂಗಳ ವಿರೋಧಿಯಾಗಿ ಕಾಂಗ್ರೆಸ್ ಸರಕಾರ ನಡೆಯುತ್ತಿದೆ. ಹಿಂದೂಗಳ…

Read More

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ. ೨೨ ರಿಂದ ಅ. ೭.ರ ವರೆಗೆ

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ೨೦೨೫ನ್ನು ಬಾಗಬಾನ ಸಮಾಜ ವತಿಯಿಂದ ಸೆ. ೨೨ ರಿಂದ ಅ. ೭.ರ ವರೆಗೆ ನಡೆಯಲ್ಲಿದೆ ಎಂದು ಕರ್ನಾಟಕ ರಾಜ್ಯ ವಾಗಬಾನ ಸಮಾಜ ಮತ್ತು ಕಲಬುರಗಿ ಜಿಲ್ಲಾ ಬಾಗಬಾನ ಸಮಾಜ ಅಧ್ಯಕ್ಷರಾದ ಇಲಿಯಾಸ್ ಸೇಠ ಬಾಗಬಾನ ಹೇಳಿದರು. ಬಾಗಬಾನ್ ಸಮಾಜ ಕೂಡ ಹಿಂದುಳಿದ ವರ್ಗವಾಗಿದ್ದು, ಇಡಿ ರಾಜ್ಯದಲ್ಲಿ ಬಾಗಬಾನ ಸಮಾಜದ ಎಲ್ಲಾ ಬಂಧುಗಳು ಸದರಿ ಸಮೀಕ್ಷೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ತಮ್ಮ ಜಿಲ್ಲೆಯಲ್ಲಿ, ತಾಲೂಕುಗಳಲ್ಲಿ…

Read More

PWD ಅಧಿಕಾರಿಯ ಮುಖಕ್ಕೆ ಮಸಿ ಬಳಿದ ಪ್ರಕರಣ| 11 ಜನ ಬಂಧನ

ಕಲಬುರಗಿ; ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿ ಮುಂದೆ, ಕಣ್ಣಿ ಮಾರುಕಟ್ಟೆಯಲ್ಲಿ ಕನ್ನಡ ಫಲಕ ತೆಗೆಯುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಲೋಕೋಪಯೋಗಿ ಅಧಿಕಾರಿಯ ಮೇಲೆ ಪ್ರತಿಭಟನಾ ಸಂದರ್ಭದಲ್ಲಿ ಕಪ್ಪು ಬಣ್ಣ ಬಳಿದಿದ್ದಾರೆ ಎಂಬ ಆರೋಪದ ಮೇಲೆ 11 ಜನರ ವಿರುದ್ದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 11 ಜನರನ್ನು ಬಂಧಿಸಿದ್ದಾರೆ.

Read More

ಮಕ್ಕಳಲ್ಲಿ ಸೂಕ್ಷ್ಮ ಪ್ರಪಂಚದ ಯಾತ್ರೆ ಆವಶ್ಯಕ: ಡಾ. ಪಾಟೀಲ

ಕಲಬುರಗಿ: ಇಂದು ಎಲ್ಲ ಮಕ್ಕಳ ಕೈಯಲ್ಲಿ ಕೇವಲ ಮೊಬೈಲ್ ಕಾಣುತ್ತದೆ, ಆದರೆ ಕಾಲೇಜಿನ ವಿದ್ಯಾರ್ಥಿನಿಯರು  ಉತ್ಸವ ಆಯೋಜಿಸಿರುವುದು ಮಕ್ಕಳಲ್ಲಿ ಸೂಕ್ಷ್ಮ ಪ್ರಪಂಚದ ಜ್ಞಾನ ಅವಶ್ಯಕ ಎಂದು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಸಿ. ಸಿ. ಪಾಟೀಲ ಅವರು ನುಡಿದರು. ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ಒಂದು ದಿನದ ಹುದುಗುವಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು. ಇಂದು ಸೂಕ್ಷ್ಮ ಜೀವಶಾಸ್ತ್ರದ ಅಧ್ಯಯನ ಅತಿ…

Read More

ಬಸವೇಶ್ವರ ಆಸ್ಪತ್ರೆಯಲ್ಲಿ ಮ್ಯಾಸ್ತೀನಿಯಾ ಗ್ರಾವಿಸ್ ಕ್ರೈಸಿ ರೋಗದಿಂದ ಬಳಲುತ್ತಿರುವ ಮಹಿಳೆಗೆ ಯಶಸ್ವಿ ಚಿಕಿತ್ಸೆ

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ನಿವಾಸಿ ನಿರ್ಮಲಾ ಎಂಬ 30 ವರ್ಷದ ಹೆಣ್ಣು ಮಗಳು ತೀವ್ರ ಉಸಿರಾಟ ತೊಂದರೆಯಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರಗೆ ದಾಖಲಾದಳು. ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಅಲ್ಲಿಯ ವೈದ್ಯರು ಚಿಕಿತ್ಸೆ ಆರಂಭಿಸಿದರು ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ಸಂಭಂದಿಸಿದ ಪರೀಕ್ಷೆಗಳನ್ನು ಆರಂಭಿಸಿದಾಗ ಪರೀಕ್ಷೆಯಲ್ಲಿ ಅವರಿಗೆ ಜೀವಕ್ಕೆ ಅಪಾಯಕಾರಿಯಾದ ಮ್ಯಾಸ್ತೀನಿಯಾ ಗ್ರಾವಿಸ್ ಕ್ರೈಸ ಎಂಬ ರೋಗವಿದೆ ಎಂಬುದು ದೃಢಪಟ್ಟಿತು. ಇದು ಅವರಲ್ಲಿ ಜೀವಕ್ಕೆ ಅಪಾಯಕಾರಿಯಾದ ಮಟ್ಟ…

Read More

ನಿಖರವಾದ ಮಾಹಿತಿ ಇದ್ದಾಗ ಮಾತ್ರ ಸರ್ಕಾರಕ್ಕೆ ಸವಲತ್ತುಗಳು ಮತ್ತು ಮೀಸಲಾತಿ ನೀಡಲು ಅನುಕೂಲ : ತಿಪ್ಪಣ್ಣಪ್ಪ ಕಮಕನೂರ

ಜಿಲ್ಲಾ ಕೋಲಿ-ಕಬ್ಬಲಿಗ ಸಮುದಾಯಗಳ ಸಮನ್ವಯ ಸಮಿತಿ ಸುದ್ದಿಗೋಷ್ಠಿ ಕಲಬುರಗಿ : ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿ 2025ರ ಸೆಪ್ಟೆಂಬರ್-22 ರಿಂದ ಪ್ರಾರಂಭವಾಗುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸಮಾಜದ ಬಂಧುಗಳು ಯಾವ ಜಾತಿ ಬರೆಸಬೇಕೆಂದು ಸಮಾಜದ ಮುಖಂಡರು ಚರ್ಚಿಸಿ ಈ ರೀತಿ ನಿರ್ಣಯ ಮಾಡಲಾಗಿದ್ದು,ಮೂಲ ಜಾತಿ ಕಾಲಂ 09 ರಲ್ಲಿ ಕಬ್ಬಲಿಗ ಸಂಕೇತ ಸಂಖ್ಯೆ A-0588 ಎಂದು ಬರೆಸಬೇಕು. ಅದರಂತೆ ಉಪಜಾತಿ ಕಾಲಂ 10 ರಲ್ಲಿ ಕೋಲಿ ಸಂಕೇತ ಸಂಖ್ಯೆ: A-0712 ಪರ್ಯಾಯ ಪದ ಜಾತಿ ಕಾಲಂ…

Read More

ವಿಶ್ವಕರ್ಮ ಜಯಂತಿ ಅದ್ದೂರಿ ಆಚರಣೆ

ಕಲಬುರಗಿ: ವಿಶ್ವಕರ್ಮ ಹೋರಾಟ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ಕಲಬುರಗಿ ದಕ್ಷಿಣ ವಲಯದ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಜಯಂತಿಯ ನಿಮಿತ್ಯ ವಿಶ್ವಕರ್ಮರ ಭಾವಚಿತ್ರವನ್ನು ನಗರದ ರಾಮ ಮಂದಿರದಿAದ ಕರುಣೇಶ್ವರ ನಗರದವರೆಗೆ ಭವ್ಯ ಮೆರವಣಿಗೆ ನಡೆಸಿ ಸಂಭ್ರಮದಿAದ ಆಚರಿಸಲಾಯಿತು. ಬೃಹತ್ ಮೆರವಣಿಗೆಗೆ ವಿಶ್ವಕರ್ಮ ಸಮಾಜದ ಪೂಜ್ಯ ಪ್ರಣವನಿರಂಜನ ಸ್ವಾಮಿಜಿ, ಪೂಜ್ಯ ಬ್ರಹ್ಮಾನಿ ಬೆಂದ ಸ್ವಾಮಿಜಿ ನೀಲಕಂಠರಾವ ಸ್ವಾಮೀಜಿ ಹಾಗೂ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಚಾಲನ ನೀಡಿದರು. ಈ ಸಂದರ್ಭದಲ್ಲಿ ನೂರಾರು ಮುತ್ತೈದೆಯರಿಂದ ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ…

Read More

ಸುರಪುರ:ಪ್ರಧಾನಿ ನರೇಂದ್ರ ಮೋದಿ ಜನುಮ ದಿನಕ್ಕೆ ರಕ್ತದಾನದ ಶುಭಾಷಯ

ಸುರಪುರ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ದಿನವನ್ನು ಸುರಪುರ ಮತ್ತು ಹುಣಸಗಿ ತಾಲೂಕು ಬಿಜೆಪಿ ಮಂಡಲ ಘಟಕಗಳಿಂದ ವಿಶೇಷವಾಗಿ ಜನುಮ ದಿನ ಆಚರಿಸಿ ಪ್ರಧಾನಮಂತ್ರಿಗೆ ಶುಭ ಕೋರಲಾಗಿದೆ. ನಗರದ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ರಕ್ತದಾನ ಮಾಡಿ ಮಾತನಾಡಿ,ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಣಿವರಿಯದ ನಾಯಕರಾಗಿದ್ದಾರೆ.ಅವರ ಜನುಮ ದಿನವನ್ನು ನಾವೆಲ್ಲರು ಇಂದು ರಕ್ತದಾನ ಮಾಡಿ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ…

Read More

ಮುಖ್ಯಮಂತ್ರಿಗಳಿಂದ 649.47 ಕೋಟಿ ರೂ. ಮೊತ್ತದ ಅಭವೃದ್ಧಿ ಕಾರ್ಯಗಳಿಗೆ ಚಾಲನೆ

ಕಲಬುರಗಿ, ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಮಾರಂಭದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಭಾಗದ ಕೆ.ಕೆ.ಆರ್.ಡಿ.ಬಿ ಮತ್ತು ಇತರೆ ಇಲಾಖೆಯ 570.05 ಕೋಟಿ ರೂ. ಮೊತ್ತದ 133 ಕಾಮಗಾರಿಗಳಿಗೆ ಅಡಿಗಲ್ಲು ಮತ್ತು 79.41 ಕೋಟಿ ರೂ. ಮೊತ್ತದ 26 ಕಾಮಗಾರಿಗಳ ಲೋಕಾರ್ಪಣೆ ಸೇರಿದಂತೆ ಒಟ್ಟಾರೆ 649.47 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಡಿಯಲ್ಲಿ 350.05 ಕೋಟಿ ರೂ. ಮೊತ್ತದ 112 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರೆ 3.35 ಕೋಟಿ ರೂ. ಮೊತ್ತದ…

Read More
error: Content is protected !!