
ಪೌರಕಾರ್ಮಿಕರ ದಿನಾಚರಣೆ ಹಬ್ಬವಾಗಬೇಕು : ಶಂಭುಲಿಂಗ ದೇಸಾಯಿ
ಜೇವರ್ಗಿ ವರ್ಷದ ೩೬೫ ದಿನಗಳ ವರೆಗೂ ಕೂಡ ನಿತ್ಯ ನಿರಂತರ ಶ್ರಮ ಪಟ್ಟು ದುಡಿಯುವ ಕಾಯಕಯೋಗಿಗಳು ನಮ್ಮ ಪೌರ ಕಾರ್ಮಿಕರು. ಇಂದು ನಾವು ಆಚರಿಸುತ್ತಿರುವ ಈ ಪೌರ ಕಾರ್ಮಿಕರ ದಿನಾಚರಣೆಯನ್ನ ಒಂದು ದೊಡ್ಡ ಹಬ್ಬದಂತೆ ಆಚರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅಭೀಮತಪಟ್ಟರು. ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಜೇವರ್ಗಿ ಹಾಗೂ ಪುರಸಭೆ ಕಾರ್ಯಲಯ ಜೇವರ್ಗಿ ರವರ ಸಹಯೋಗದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನುದ್ದೆಶಿಸಿ ಮುಖ್ಯಾಧಿಕಾರಿ ಶಂಭುಲಿಂಗ…