
ಕಲಬುರಗಿ ಜಿಲ್ಲೆಯ 100 ಅರಿವು ಕೇಂದ್ರಗಳಿಗೆ ಹೊಸ ರೂಪ ಜನರ ಬದುಕಿನ ಭಾಗವಾಗುತ್ತಿರುವ ಗ್ರಾಮೀಣ ಗ್ರಂಥಾಲಯಗಳು
ಗ್ರಾಮೀಣ ಪರಿಸರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕ್ರಮೇಣ ಒಂದು ಅದ್ಭುತ ಘಟಿಸತೊಡಗಿದೆ. ಗ್ರಾಮೀಣ ಮಕ್ಕಳು, ಯುವಕರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಉತ್ಸಾಹದಲ್ಲಿರುವ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರು, ವಯಸ್ಕರು, ಹಿರಿಯ ನಾಗರಿಕರು ಹೀಗೆ ಯಾವುದೇ ಭೇದ ಭಾವವಿಲ್ಲದೆ ವೈವಿಧ್ಯತೆಯನ್ನು ಹಂಚಿಕೊಳ್ಳುವ ಅರಿವು ಕೇಂದ್ರಗಳೆಂಬ ಜ್ಞಾನದೇಗುಲಗಳು ಜನಪ್ರಿಯಗೊಳ್ಳುತ್ತಿವೆ. ಒಳ ಪ್ರವೇಶಿಸುತ್ತಿದ್ದಂತೆ ಮಾನಸಿಕವಾಗಿ ನೆಮ್ಮದಿ ತರುವ ಪರಿಸರ, ಅವಶ್ಯಕತೆಗೆ ಅನುಗುಣವಾಗಿ ಉಪಯುಕ್ತ ಪುಸ್ತಕಗಳು, ವೃತ್ತಪತ್ರಿಕೆಗಳು, ಮಾಹಿತಿಗಳನ್ನು ಜಾಲಾಡಲು ಡಿಜಿಟಲೀಕರಣದ ವ್ಯವಸ್ಥೆ ಈ ಎಲ್ಲಾ ಸಾಕಾರಗೊಂಡಿರುವ ಗ್ರಾಮೀಣ ಗ್ರಂಥಾಲಯಗಳಾದ ʼಅರಿವು ಕೇಂದ್ರʼಗಳು ಈಗ…