
ಬಿಜೆಪಿ ಪಕ್ಷದ ವತಿಯಿಂದ ಸೇವಾ ಪಾಕ್ಷಿಕ ಅಡಿಯಲ್ಲಿ ರಕ್ತದಾನ, ಆರೊಗ್ಯ ತಪಾಸಣೆ ಶಿಬಿರ
ಚಿತ್ತಾಪುರ : ಚಿತ್ತಾಪುರ ಬಿಜೆಪಿ ಮಂಡಲದ ವತಿಯಿಂದ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ ೧೧೦ ನೇ ಜಯಂತಿ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಪಟ್ಟಣದ ಅಕ್ಕಮಹಾದೇವಿ ಮಂದಿರದ ಅವರಣದಲ್ಲಿ ರಕ್ತದಾನ ಮತ್ತು ಆರೊಗ್ಯ ತಪಾಸಣಾ ಶಿಬಿರನ್ನು ಯಶಸ್ವಿಯಾಗಿ ಆಯೊಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೇವಾ ಪಾಕ್ಷಿಕ ಸಂಚಾಲಕ ಶರಣಪ್ಪ ತಳವಾರ ಅವರು ಸೇವಾ ಪಾಕ್ಷಿಕ ಯೊಜನೆಯಡಿ ನಿರಂತರವಾಗಿ ನೂರಾರು ಕಾರ್ಯಕ್ರಮಗಳು ನಡೆಯುತ್ತವೆ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬಂದಿರುವದು ಶ್ಲಾಘನೀಯ…