
ಕರ್ನಾಟಕ ಸರ್ಕಾರದ “ಎಲಿವೇಟ್“ ಪ್ರೋತ್ಸಾಹದಿಂದೊಂದಿಗೆ ಯಶಸ್ಸಿನತ್ತ ನವೋದ್ಯಮಗಳು- ಸಚಿವ ಪ್ರಿಯಾಂಕ್ ಖರ್ಗೆ ಹರ್ಷ
ಕಲಬುರಗಿ : ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಜಾರಿಗೆ ತಂದಿರುವ ಎಲಿವೇಟ್ ಸಹಾಯಧನ ಕಾರ್ಯಕ್ರಮದ ನೆರವು ಪಡೆದ ಬೆಂಗಳೂರು ಮೂಲದ ಏರೋಸ್ಪೇಸ್ ಕಂಪೆನಿಯೊಂದು AI-ಸ್ಥಳೀಯ ರೇಡಿಯೋ ಆವರ್ತನ ಉಪಗ್ರಹ ಮೂಲಸೌಕರ್ಯವನ್ನು ನಿರ್ಮಿಸಲು $2.5 ಮಿಲಿಯನ್ ಪ್ರೀ ಸೀಡ್ ಫಂಡ್ ಸಂಗ್ರಹಿಸಿದೆ. ಎಲಿವೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನಸಹಾಯ ಪಡೆಯಲು ಅರ್ಹತೆ ಪಡೆದ ವಿಜೇತ ಕಂಪೆನಿಗಳು ಯಶಸ್ಸಿನೆಡೆಗೆ ಉನ್ನತಿಯನ್ನು ಸಾಧಿಸುತ್ತಿರುವುದು ತಮಗೆ ಸಂತೋಷ ತಂದಿದೆ. ವಿನೂತನ ಚಿಂತನೆಗಳನ್ನು ಹೊಂದಿದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ…