ಕಲಬುರಗಿ : ರಾಘವೇಂದ್ರ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ, 2,75,000/-ರೂ ಮೌಲ್ಯದ ವಿವಿಧ ಕಂಪನಿಯ 06 ದ್ವಿ-ಚಕ್ರ ವಾಹನಗಳ ವಶಕ್ಕೆ ಪಡೆದು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿತನಾದ ಗುಲಾಮ ಅಲಿ ಹುಸೇನಿ ಕಾಲೋನಿ ಚಿದ್ರಿ ರೋಡ ಬೀದರ ಇತನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಗೆ ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಆರೋಪಿತನು ಕಲಬುರಗಿ ನಗರದ ವಿವಿಧ ಸ್ಥಳದಲ್ಲಿ ಕಳ್ಳತನ ಮಾಡಿದ ಬಗ್ಗೆ ತನ್ನೊಪ್ಪಿಕೊಂಡಿದ್ದು, ಆರೋಪಿತನಿಂದ ಒಟ್ಟು 06 ವಿವಿಧ ಕಂಪನಿಯ ಮೋಟರ್ ಸೈಕಲ್ಗಳು 2,75,000/- ರೂಪಾಯಿ ಮೌಲ್ಯದ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ನವರು ಶ್ಲಾಘಿಸಿರುತ್ತಾರೆ.


