ಪ್ರತಿಗ್ರಾಮಪಂಚಾಯಿಂದ ಕನಿಷ್ಠ ಎರಡು ಗ್ರಾಮಗಳನ್ನು ತಂಬಾಕುಮುಕ್ತಗ್ರಾಮ ಫೋಷಣೆ ಮಾಡಿ ಅಪರ ಜಿಲ್ಲಾಧಿಕಾರಿರಾಯಪ್ಪ ಹುಣಸಗಿ

ಕಲಬುರಗಿ: ಕಲಬುರಗಿಜಿಲ್ಲೆಯ ಪ್ರತಿಗ್ರಾಮ ಪಂಚಾಯಿತಿಯಿಂದ ಕನಿಷ್ಠ ಎರಡು ಗ್ರಾಮಗಳನ್ನು ತಂಬಾಕುಮುಕ್ತಗ್ರಾಮಗಳು ಫೋಷಣೆ ಮಾಡಿಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿರಾಯಪ್ಪ ಹುಣಸಗಿ ಸೂಚನೆ ನೀಡಿದರು.
 ಬುಧುವಾರದಂದುಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋಕಾನ್ಪರೆನ್ಸ್ ಹಾಲ್‍ನಲ್ಲಿತಂಬಾಕು ನಿಯಂತ್ರಣಕುರಿತಂತೆಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ಈಗಾಗಲೇ ಚಿತಾಪೂರತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ  ತಂಬಾಕು ಮುಕ್ತ ಗ್ರಾಮಎಂದು ಫೋಷಿಸಲಾಗಿದೆ.ಅದರಂತೆಎಲ್ಲಾ ಅಧಿಕಾರಿಗಳು ಸಮನ್ವಯತೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಯೊಂದು ತಾಲ್ಲೂಕುಗಳಲ್ಲಿ ಗ್ರಾಮಗಳಲ್ಲಿ ಒಂದುತಂಡವನ್ನು ರಚಿಸಿ ಅಂಗಡಿಗಳಿಗೆ ಹೋಗಿ ಭೇಟಿ ನೀಡಿ ಪರಿಶೀಲಿಸಬೇಕು.ಶಾಲಾಕಾಲೇಜುಗಳಲ್ಲಿ ನಿಬಂಧ, ಭಾಷಣ, ರಂಗೋಲಿ, ಚಿತ್ರಕಲಾಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಬೇಕು.ಎಂದರು.
ನವೆಂಬರ್ 12 ರಂದುಜಿಲ್ಲಾಮಟ್ಟದಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಂಬಂಧಪಟ್ಟಅಧಿಕಾರಿಗಳು ಒಂದುತಂಡವನ್ನು ರೂಪಿಸಿ ಅಂಗಡಿಗಳ ಮೇಲೆ ದಾಳಿ ಮಾಡಿ ಪ್ರಕರಣಗಳು ದಾಖಲಿಸಬೇಕು.ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆಯಿಂದ ಎಷ್ಟು ಜನರು ಸಾವನ್ನುಪ್ಪುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಅಧಿಕಾರಿಗಳು ಶ್ರಮಿಸಬೇಕೆಂದುಅವರು ಹೇಳಿದರು.
ಸೆಪ್ಟೆಂಬರ್ 11 ರಂದುಜಿಲ್ಲೆಯಎಲ್ಲಾತಾಲೂಕಿನ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮತ್ತುಜಿಲ್ಲೆಯಎಲ್ಲಾತಾಲ್ಲೂಕಿನಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯ ಅಧಿಕಾರಿಗಳು ಸಿ.ಆರ್.ಪಿ.ಮತ್ತು ಪ್ರೌಢಶಾಲಾ ಮುಖ್ಯಗುರುಗಳು ಆನ್ ಲೈನ್ ಸಭೆಯನ್ನುಕರೆದು ಸದರಿTOFFI App  ಬಗ್ಗೆ ಮಾಹಿತಿ ನೀಡಿ ಅನುಪಾಲನೆ ಮಾಡಲಾಗುತ್ತದೆ.ಇಲ್ಲಿಯವರೆಗೆ 130 ಶಾಲೆಗಳು ಪೂರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳು ಕಡ್ಡಾಯ  TOFEI App Complianace ಪೂರ್ಣಗೊಳಿಸಿದ್ದು, ಮುಂದಿನ ದಿನಗಳÀಲ್ಲಿ ಜಿಲ್ಲೆಯಎಲ್ಲಾ ಶಾಲೆಗಳು ಕಡ್ಡಾಯವಾಗಿ  TOFEI App download  ಮಾಡಿಕೊಂಡು ಸೆಪ್ಟೆಂಬರ್ 19 ರಂದು ಕಚೇರಿ ಆದೇಶ ಮಾಡಿ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಸಭೆಯ ಗಮನಕ್ಕೆ ಅಧಿಕಾರಿಗಳು ತಂದರು.
ಕಳೆದ ಜುಲೈ 23 ರಿಂದ 30ಪ ರವರೆಗೆಒಟ್ಟು 10 ತಾಲ್ಲೂಕಿನಲ್ಲಿಅಫಜಲಪೂರತಾಲೂಕಿನಲ್ಲಿಮತ್ತು ವಿಶೇಷವಾಗಿ ಚಿತ್ತಾಪೂರತಾಲೂಕಿನಲ್ಲಿಜುಲೈ 22ರಂದುಚಿತ್ತಾಪೂರ ತಹಶೀಲ್ದಾರ ಅವರಅಧ್ಯಕ್ಷತೆತಾಲೂಕಾಆರೋಗ್ಯ ಅಧಿಕಾರಿಗಳವರ ನೇತೃತ್ವದಲ್ಲಿತಾಲ್ಲೂಕಿನಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯನ್ನುಕರೆದುಒಟ್ಟು 10 ಸ್ಥಳಗಳಲ್ಲಿ ಅದರಲ್ಲಿ 5 ಗ್ರಾಮ ಪಂಚಾಯಿತಿ ಮಟ್ಟದಲ್ಲಿಕೋಟ್ಪಾ ದಾಳಿಯನ್ನು ಕೈಗೊಂಡುಒಟ್ಟು 190 ಪ್ರಕರಣಗಳು ಒಟ್ಟುರೂ.31900 ದಂಡ ಮೊತ್ತ ಸಂಗ್ರಹಿಸಲಾಗಿದೆ. ಮುಂದುವರೆದಜಿಲ್ಲೆಯಲ್ಲಿಒಟ್ಟು 39 ಸ್ಥಳಗಳಲ್ಲಿ ಒಟ್ಟು 527 ಪ್ರಕರಣಗಳು ಒಟ್ಟುದಂಡದ ಮೊತ್ತರೂ.87600 ಸಂಗ್ರಹಿಸಲಾಗಿದೆಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಅಧಿಕಾರಿಜಂಟಿ ಬ್ಯಾಂಕ್‍ಖಾತೆಜಮ್ ಮಾಡಲಾಗಿದೆಎಂದುಜಿಲ್ಲಾತಂಬಾಕು ನಿಯಂತ್ರಣದಕೋಶದ ಸಲಹೆ ಗಾರ್ತಿ ಸುಜಾತ ಪಾಟೀಲ ಸಭೆಯಲ್ಲಿ ತಿಳಿಸಿದರು.
ತಂಬಾಕು ಮುಕ್ತ ಯುವಅಭಿಯಾನ 3.0 ಕ್ರಿಯಾಯೋಜನೆಯಂತೆಜಿಲ್ಲೆಯಲ್ಲಿ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಬೇಕು.ಕ್ರಿಯಾಯೋಜನೆರೂಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳು, ತಂಬಾಕು ಮುಕ್ತ ಗ್ರಾಮಗಳು, ಹಾಗೂ ತಂಭಕು ಮಾರಾಟ  ಪರವಾನಿಗೆ ವಿಷಯವಾಗಿ ಚರ್ಚಿಸಲಾಯಿತು.
ಈಗಾಗಲೇ ತಂಬಾಕು ಮುಕ್ತ ಯುವಅಭಿಯಾನಕುರಿತುಅಕ್ಟೋಬರ್ ದಿಂದ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ  ಮಹಾನಗರ ಪಾಲಿಕೆ ಕಲಬುರಗಿ ಪೌರಕಾರ್ಮಿಕರಿಗೆ /ಸಿಬ್ಬಂದಿಗಳಿಗೆ ಜೇಸ್ಕಾಂ ಸಿಬ್ಬಂದಿಗಳಿಗೆ ಆರೋಗ್ಯತಪಾಸಣೆ ಶಿಬಿರ,  ಜಿಲ್ಲೆಯ ಪ್ರಮುಖ ಅಧಿಕಾರಿಗಳು ಮತ್ತು ಸೇಲೆಬ್ರಟಿಗಳಿಂದ ವಿಡಿಯೋ ಬೈಟ್ಸ್ ಸಂಗ್ರಹಣಕೇಂದ್ರಿಯ ವಿ.ವಿ. ವಿದ್ಯಾರ್ಥಿಗಳಿಂದ ಮೈಮ್/ಕಿರುಚಿತ್ರ ಬಿ.ಇಡ್‍ಕಾಲೇಜು ವಿದ್ಯಾರ್ಥಿಗಳಿಂದ ಸ್ಲೋಗನ್ ಬರವಣಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪತ್ರಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ಪತ್ರಕರ/ಲೇಖನ ಬರವಣೆಗೆಕೆಲವೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಿ.ಪಿ.ಟಿ. ಮೂಲಕ ಜಿಲ್ಲಾತಂಬಾಕುನಿಯಂತ್ರಣದಸಲಹೆಗಾರ್ತಿ ಸುಜಾತ ಪಟೇಲ್‍ಅವರು ಹೇಳಿದರು.
ಸಭೆಯಲ್ಲಿಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, , ಜಿಲ್ಲಾತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಮೀಕ್ಷಣಾಧಿಕಾರಿರಾಕೇಶ ಕಾಂಬಳೆ,ತಾಲೂಕು ಪಂಚಾಯತ್‍ಕಾರ್ಯನಿರ್ವಾಹಕಅಧಿಕಾರಿ ಮಹ್ಮದ್ ಸೈಯದ್ ಪಟೇಲ್, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!