ಸಕಲ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ
ಕಲಬುರಗಿ, ಸಂತ ಶ್ರೇಷ್ಟ ಕನಕದಾಸರ ಜಯಂತಿ ಕರ್ಯಕ್ರಮ ನವೆಂಬರ್ ೮ ರಂದು ಕಲಬುರಗಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಣೆಗೆ ನರ್ಧರಿಸಲಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಯಂತಿಯ ಪರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೩ ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಜಯಂತಿ ಕರ್ಯಕ್ರಮ ಆಚರಿಸಲಾಗುತ್ತದೆ ಎಂದರು.
ಜಯಂತಿಗೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸಲು, ಕನಕದಾಸರ ಜೀವನದ ಕುರಿತು ಬೆಳಕು ಚೆಲ್ಲುವ ರ್ವ ತಜ್ಞ ಉಪನ್ಯಾಸಕರಿಂದ ಉಪನ್ಯಾಸ ಆಯೋಜಿಸಲು ಸಹ ಸಭೆ ಒಪ್ಪಿಗೆ ಸೂಚಿಸಿತ್ತು.ಜಿಲ್ಲಾಡಳಿತದಿಂದ ಆಯೋಜನೆಯ ಕರ್ಯಕ್ರಮ ರ್ಥಪರ್ಣ ಅಚರಿಸಬೇಕಿರುವ ಹಿನ್ನೆಲೆಯಲ್ಲಿ ಅಂದು ರಂಗಮಂದಿರ ಆವರಣ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನಿರಿನ ವ್ಯವಸ್ಥೆ ಮಾಡಬೇಕು. ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ಕಾಲೇಜು ಮಕ್ಕಳು ಮತ್ತು ಚುನಾಯಿತ ಪ್ರತಿನಿಧಿಗಳು ಅಗಮಿಸುವುದರಿಂದ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಎ.ಡಿ.ಸಿ ಸೂಚಿಸಿದರು.
ಇನ್ನು ತಾಲೂಕಾ ಮಟ್ಟದಲ್ಲಿಯೂ ರ್ಥಪರ್ಣವಾಗಿ ಕನಕದಾಸರ ಜಯಂತಿ ಆಚರಣೆಗೆ ತಾಲೂಕಿನ ತಹಶೀಲ್ದಾರರು ಪರ್ವಭಾವಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅವರು, ಎಲ್ಲಾ ರ್ಕಾರಿ, ಶಾಲಾ-ಕಾಲೇಜುಗಳಲ್ಲಿ ಕನಕದಾಸರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಬೇಕೆಂದರು. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಸೂಚಿಸಿದರು.
ಕನಾ೯ಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಮಾತನಾಡಿ, ಪ್ರತಿ ರ್ಷದಂತೆ ಈ ರ್ಷವು ಸಂಭ್ರಮದಿಂದ ಕನಕದಾಸರ ಜಯಂತಿ ಆಚರಿಸಬೇಕು. ಮೆರವಣಿಗೆ ಮತ್ತು ವೇದಿಕೆ ಕರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಾಲೇಜು ಮಕ್ಕಳನ್ನು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಕರ್ಯಕ್ರಮಲ್ಲಿ ಭಾಗಿಯಾಗುವಂತೆ ನರ್ದೇಶನ ನೀಡಬೇಕು. ಮೆರವಣಿಗೆಗೆ ಎರಡು ಡೊಳ್ಳು ಕಲಾ ತಂಡ ನಿಯೋಜಿಸಬೇಕು ಎಂದರು. ಸಭೆಯಲ್ಲಿ ಭಾಗವಹಿಸಿದ ಸಮುದಾಯದ ಮುಖಂಡರು ಕನಕದಾಸರರ ಜಯಂತಿ ಕರ್ಯಕ್ರಮ ರ್ಥಪರ್ಣವಾಗಿ ಆಚರಣೆಗೆ ಅನೇಕ ಸಲಹೆ ನೀಡಿದರು.
ಸಭೆಯಲ್ಲಿ ಶಿಷ್ಠಾಚಾರ ತಹಶೀಲ್ದಾರ ಉಮಾಕಂತ ಹಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆಯ ಉಪನರ್ದೇಶಕಿ ಜಗದೀಶ್ವರಿ ಅ. ನಾಶಿ, ರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ನಾಗೇಂದ್ರ ಪೂಜಾರಿ, ಜಿಲ್ಲಾ ಘಟಕದ ನರ್ದೇಶಕರಾದ ಕುಪೇಂದ್ರ ಬರಗಾಲಿ, ಶಿವಲಿಂಗಪ್ಪ ಸಾವಳಗಿ, ಜಗನ್ನಾಥ ನಾಗೂರ, ನರ್ಮಲಾ ಬರಗಾಲಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.


