ಜೇವರ್ಗಿ ವರ್ಷದ ೩೬೫ ದಿನಗಳ ವರೆಗೂ ಕೂಡ ನಿತ್ಯ ನಿರಂತರ ಶ್ರಮ ಪಟ್ಟು ದುಡಿಯುವ ಕಾಯಕಯೋಗಿಗಳು ನಮ್ಮ ಪೌರ ಕಾರ್ಮಿಕರು. ಇಂದು ನಾವು ಆಚರಿಸುತ್ತಿರುವ ಈ ಪೌರ ಕಾರ್ಮಿಕರ ದಿನಾಚರಣೆಯನ್ನ ಒಂದು ದೊಡ್ಡ ಹಬ್ಬದಂತೆ ಆಚರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅಭೀಮತಪಟ್ಟರು.
ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಜೇವರ್ಗಿ ಹಾಗೂ ಪುರಸಭೆ ಕಾರ್ಯಲಯ ಜೇವರ್ಗಿ ರವರ ಸಹಯೋಗದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೆಶಿಸಿ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ ಬಸವಣ್ಣ ನವರು ಹೇಳಿದಂತೆ ಕಾಯಕದಲ್ಲಿ ಕೈಲಾಸವನ್ನು ಕಾಣುವ ಕಾಯಕ ಯೋಗಿಗಳು ನಮ್ಮ ಪೌರ ಕಾರ್ಮಿಕರು. ಅವರು ವರ್ಷದ ೩೬೫ ದಿನಗಳ ವರೆಗು ಕೂಡ ನಿತ್ಯ ನಿರಂತರವಾಗಿ ಕಾಯಕದಲ್ಲಿ ನಿರತರಾಗುತ್ತಾರೆ. ಅವರಿಗೆ ಬಿಡುವಿಲ್ಲ. ಪಟ್ಟಣ, ಗ್ರಾಮ, ಹಾಗೂ ನಗರ ಸೇರಿದಂತೆ ಎಲ್ಲಾಕಡೆಯಲ್ಲು ಕೂಡ ಸ್ವಚ್ಚತೆಯನ್ನ ಕಾಪಾಡುವವರು ಪೌರ ಕಾರ್ಮಿಕರು. ಅವರಿಲ್ಲದ ಗ್ರಾಮಗಳನ್ನ ಉಹಿಸಲು ಸಾದ್ಯವಿಲ್ಲ. ಪೌರ ಕಾರ್ಮಿಕರನ್ನ ಜನರು ಗೌರವಿಸಬೇಕು. ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವ ಕೆಲಸವನ್ನು ಮಾಡೊಣ. ಪೌರ ಕಾರ್ಮಿಕರು ಯಾವುದೆ ದುಶ್ಚಟಗಳಿಗೆ ಬಲಿಯಾಗಬೇಡಿ ಇದು ನನ್ನ ಕೋರಿಕೆ ಎಂದರು.
ಸರಕಾರದ ಸೌಲಭ್ಯಗಳನ್ನ ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ. ಹಾಗೂ ತಮ್ಮ ಕಾಯಕದ ಮೇಲೆ ನಿಷ್ಟೆ ಇಡುವುದರ ಮುಲಕ ಕಾಯಕದಲ್ಲಿ ಕೈಲಾಸವನ್ನಿ ಕಾಣಿ
ಈ ಸಂದರ್ಭದಲ್ಲಿ ತಾಲೂಕ ತಹಸೀಲ್ದಾರರು ಮಲ್ಲಣ್ಣ ಯಲಗೋಡ, ದಾನಪ್ಪಗೌಡ ಹಳಿಮನಿ, ಸಿರಾಜುದ್ದಿನ್ ಬಡಾಗರ್, ಲಕ್ಷö್ಮಣ ದೊಡ್ಮನಿ, ಶಿವಮ್ಮ ನಂದಿ ರಾಜಶೇಕರ ಅವರಾದ, ನಿಂಗಪ್ಪ ಪೂಜಾರಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪೌರ ಕಾರ್ಮಿಕರು, ಪುರಸಭೆ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.