ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಗಾಗಿ ೨೦೨೫ ಸಮೀಕ್ಷೆಗಾಗಿ ನಿಮ್ಮ ಮನೆಗೆ ಬಂದಾಗ ಕೆಳಗೆ ತಿಳಿಸಿರುವ ಮಾದರಿಯಲ್ಲಿಯೇ ನಿಮ್ಮ ಜಾತಿ ಉಪಜಾತಿ ಕುಲಕಸುಬು ಬಗ್ಗೆ ಸ್ಪೆಲ್ಲಿಂಗ್ ಮಿಸ್ಟೇಕ್ ತಪ್ಪು ಮಾಡದಂತೆ ಗಮನಹರಿಸಲ್ಲು ತಳವಾರ್ ಸಮಾಜದ ಎಲ್ಲಾ ಕುಟುಂಬಗಳಿಗೂ ಕರ್ನಾಟಕ ರಾಜ್ಯ ತಳವಾರ್ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಚಂದ್ರಕಾAತ ತಳವಾರ್ ಮನವಿ ಮಾಡಿದ್ದಾರೆ.
ಜಾತಿ ಸಮೀಕ್ಷೆಗಾಗಿ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಕನ್ನಡದಲ್ಲಿ ಬರೆಸುವಾಗ ಗಮನಹರಿಸಿ ಕಾಲಂ ಸಂಖ್ಯೆ ೦೯ ರಲ್ಲಿ ಅಧಿಕಾರಿಗಳು ಜಾತಿ ಕೇಳಿದಾಗ ನಿವು ತಳವಾರ್ ಜಾತಿ ಹಾಗೂ ಕೋರ್ಡ್ ಸಂಖ್ಯೆ ಸಿ-೩೮.೧೩ ಅಂತ ಹೇಳಿ, ಕಾಲಂ ಸಂಖ್ಯೆ ೧೦ರಲ್ಲಿ ಅಧಿಕಾರಿಗಳು ಕೇಳಿದಾಗ ಜಾತಿ ಉಪಜಾತಿ ಪರಿಶಿಷ್ಟ ಪಂಗಡ ಜಾತಿಗೆ ಅನ್ವಯಿಸುವುದಿಲ್ಲ ಎಂದು ನಿವು ತಿಳಿಸಿ. ಕಾಲಾಂ ಸಂಖ್ಯೆ ೧೧ರಲ್ಲೀ ಅಧಿಕಾರಿಗಳು ಕೇಳಿದಾಗ ಜಾತಿ ಸಮಾನಾರ್ಥದ ಜಾತಿಗಳು ಇದ್ದಲಿ ಇಲ್ಲಾ ಅಂತ ಹೇಳಿ, ಕಾಲಾಂ ಸಂಖ್ಯೆ ೧೨ರಲ್ಲಿ ಅಧಿಕಾರಿಗಳು ನಿಮ್ಮಗೆ ಕೇಳಿದಾಗ ಜಾತಿ ಎಸ್ ಟಿ ಪ್ರಮಾಣ ಪತ್ರ ಪಡೆದಿದ್ದೀರಾ ಅಂತ ಕೇಳಿದಾಗ ನಿವು ಹೌದು ಎಂದು ಹೇಳಿ. ಕಾಲಂ ಸಂಖ್ಯೆ ೩೦ರಲ್ಲಿ ಅಧಿಕಾರಿಗಳು ಕೇಳಿದಾಗ ಜಾತಿ ಕುಲಕಸುಬು ೬೪-ತಳವಾರ ಎಂದು ಹೇಳಿ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಳವಾರ್ ಸಮುದಾಯದ ಬಂಧುಗಳಲ್ಲಿ ಚಂದ್ರಕಾಂತ ತಳವಾರ್ ಮನವಿ
