ಕಲಬುರಗಿ: ಯುವಕರು ದೇಶವನ್ನು ಕಟ್ಟುವಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಪ್ರಪಂಚದಲ್ಲಿ ಯಾವುದಾದರೂ ಪ್ರಮುಖ ಪರಿವರ್ತನೆಗಳಾಗಿವೆ ಎಂದರೆ ಯುವಕರ ತೊಡೆತಟ್ಟಿ ನಿಂತಾಗ ಮಾತ್ರ ಸಾಧ್ಯವಾಗಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಅವರು ಯುವಕರಿಗೆ ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವಂತೆ ಕರೆ ನೀಡಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಜನತಾದಳದ ಸಭೆಯಲ್ಲಿ ಮಾತನಾಡಿದ ಈ ದೇಶದ ಭವಿಷ್ಯ ರೂಪಿಸಿವಲ್ಲಿ ಯುವಕರ ಪಾತ್ರ ಪ್ರಮುಖ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ರಾಜ್ಯ ವಕ್ತಾರ ದೇವೇಗೌಡ ತೆಲ್ಲೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕರ್, ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಬಿರಿಬಿಟ್ಟಿ ಸಭೆಯನ್ನುದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ್ ಜಾದವ್ ರವರು ವಹಿಸಿ ಮಾತನಾಡುತ್ತಾ ಶೀಘ್ರದಲ್ಲಿಯೇ ಯುವ ಜನತಾದಳ ತರಬೇತಿ ಶಿಬಿರವನ್ನು ನಡೆಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ವಕ್ತಾರ ದೇವೇಗೌಡ ತೆಲ್ಲೂರ್ ಅವರ ೬೧ನೇ ಹುಟ್ಟುಹಬ್ಬವನ್ನು ಆಚರಿಸಿ ಶುಭ ಕೋರಲಾಯಿತು. ಸಭೆಯಲ್ಲಿ ದೇವೇಂದ್ರಪ್ಪ ಹಸನಾಪೂರ್ ಅವರು ನಿರೂಪಿಸಿ ವಂದಿಸಿದರು. ಏಸುನಾಥ್ ರವರು ಸ್ವಾಗತಿಸಿದರು. ಸಭೆಯಲ್ಲಿ ರಾಜಾ ಪಟೇಲ್, ಕಿರಣ ಪಾಟೀಲ್, ಹಣಮಯ್ಯ ಗುತ್ತೇದಾರ್,ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಯುವಕರು ಸಭೆಯಲ್ಲಿ ಭಾಗವಹಿಸಿದ್ದರು.