ಕಲಬುರಗಿ : ನಗರದ ಬಂಜಾರಾ ಭವನದಲ್ಲಿ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಸುಮಾರು ೧೨ ವರ್ಷಗಳಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ.
ಈ ಕಾರ್ಯಕ್ರಮದ ಮುಖಾಂತರ ದಾನಿಗಳು ಮತ್ತು ದಾಂಡಿಯಾ ಟಿಕೇಟಿನ ಹಣವನ್ನು ಪಡೆದು ಕಡು-ಬಡವರಿಗೆ ವೃದ್ಧಾಶ್ರಮ, ಅಂಧ ಮಕ್ಕಳಿಗೆ ಕಲಿತ ಸಾಮಗ್ರೀಗಳು, ಬಡವರಿಗೆ ಕಣ್ಣಿನ ಶಸ್ತç ಚಿಕಿತ್ಸೆ ಮುಂತಾದ ಸಾಮಾಜಿಕ ಸೇವೆಯನ್ನು ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಲಕ್ಷ್ಮೀ ದತ್ತಾತ್ತೇಯ ಪಾಟೀಲ್ (ರೇವೂರ), ಜಯಶ್ರೀ ಬಸವರಾಜ ಮತ್ತಿಮೊಡ, ಪ್ರದೀಪ ಸಂಗಾ-ಮಾಲಿಕರು, ರಾಯಲ್ ಎನಫಿಲ್ಡ್, ಎಪಿ ಸ್ಟುಡಿಯೊ ನಿರ್ದೇಶಕ ಅನಿಲ ಪವಾರ, ಡಾ. ಶ್ವೇತಾ ಅಲೋಕ ಪಾಟೀಲ, ಜ್ಯೋತಿ ತೇಗನೂರ, ಅನು ಪಾಟೀಲ, ಅಧ್ಯಕ್ಷೆ ಸ್ವಾತಿ ಪವಾರ, ಕಾರ್ಯದರ್ಶಿ ಶಿಲ್ಪಾ ಜೈನ್, ಪಾಸ್ಟ್ ಪ್ರೆಸಿಡೆಂಟಗಳಾದ ಚಂದನ ಸೇಠಿಯಾ, ಸಪ್ನಾ ದೇಶಪಾಂಡೆ, ಶ್ವೇತಾ ಎಂ.ಜಿ., ತೃಪ್ತಿ ಶಹಾ, ಪಲ್ಲವಿ ಮುಕ್ಕಾ, ಪ್ರಿಯಾ ಕಾವೇರಿ, ಸುನಿತಾ ಬೋರಾ, ಡೈರೇಕ್ಟರುಗಳಾದ ಅಂಜನಾ ಶಿರವಾಳ, ವಿಜಯಶ್ರೀ ಮುಕ್ಕಾ, ಸಾರಿಕಾ ರಂಗದಳ, ಮನಿಷಾ ಜೈನ್, ಪ್ರಿಯಾ ವಿರೇಶ, ಪಲ್ಲವಿ ಕೋಠಾರಿ, ತನಿಯತ್ ಬಾನು, ಸಂಗೀತಾ ಕಳಸ್ಕರ್, ದೀಪಾ ಏಡಕೆ, ಕಾಂಚನಾ ಮಂದಕನಳ್ಳಿ, ಹಾಗೂ ಗರಭಾ (ದಾಂಡಿಯಾ) ಪ್ರೇಮಿ ಸದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಜರುಗಿತು ಎಂದು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೋಟರಿ ಕೋ-ಆರ್ಡಿನೇಟರ್ ಶ್ರೀ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.
ಇನ್ನರ್ ವ್ಹಿಲ್ ಗುಲಬರ್ಗಾ ಸನ್‌ಸಿಟಿ ವತಿಯಿಂದ ‘ದೀಲ್ ಸೇ ದಾಂಡಿಯಾ’ ಗರಭಾ (ದಾಂಡಿಯಾ) ಕಾರ್ಯಕ್ರಮ
