ಎ.ಪಿ. ಸ್ಟುಡಿಯೋ ವತಿಯಿಂದ ‘ನಯಿ ರಂಗ ನವರಂಗ’ ಗರಭಾ (ದಾಂಡಿಯಾ) ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಎ.ಪಿ. ಸ್ಟುಡಿಯೋವತಿಯಿಂದ ನಗರದ ಕೋಟನೂರ ಹತ್ತಿರದ ಸಿದ್ಧಶ್ರೀ ಡೇವನ್ ಪ್ಯಾಲೆಸ್‌ನಲ್ಲಿ ಎ.ಪಿ. ಸ್ಟುಡಿಯೋವತಿಯಿಂದ ‘ನಯಿ ರಂಗ ನವರಂಗ’ ಗರಭಾ (ದಾಂಡಿಯಾ) ಕಾರ್ಯಕ್ರಮವನ್ನು ಸತತ ೭ ವರ್ಷಗಳಿಂದ ಏರ್ಪಡಿಸಲಾಯಿತು.
ಈ ಕಾರ್ಯಕ್ರಮವನ್ನು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೋಡ ಚಾಲನೆ ನೀಡಿ ಮಾತನಾಡಿ ಎ.ಪಿ. ಸ್ಟುಡಿಯೋನ ಡೈರೇಕ್ಟರ್ ಮತ್ತು ಫೌಂಡರಾದ ಅನೀಲ ಪವಾರ ರವರು ಸತತ ೧೩ ವರ್ಷಗಳಿಂದ ಕಲಬುರಗಿ ಸಮಸ್ತ ಮಹಿಳೆರಿಗೆ ಹಾಗೂ ಸಣ್ಣ ಮಕ್ಕಳಿಗೆ ಗರಭಾ ಹಾಗೂ ನೃತ್ಯವನ್ನು ಕಲಿಸುತ್ತ ಬರುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾ. ಸುÀಚಿತ್ರಾ ದುರ್ಗಿ, ಖ್ಯಾತ ನ್ಯಾಯವಾದಿ ಆರತಿ ತಿವಾರಿ, ಸಪ್ನಾ ದೇಶಪಾಂಡೆ, ಡಾ.ಸುವರ್ಣಾ ಮಂಗಲಗಿ, ಎ.ಪಿ. ಸ್ಟುಡಿಯೋನ ಡೈರೇಕ್ಟರ್ ಮತ್ತು ಫೌಂಡರಾದ ಅನೀಲ ಪವಾರ, ಸವಿತಾ ಗುತ್ತೇದಾರ, ಶಾಂತಾ ಬಿರಾದಾರ, ಗುಜಾಬಾಯಿ ಜಿ.ಪವಾರ ಇದ್ದರು. ನಂತರ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *

error: Content is protected !!