ಕಲಬುರಗಿ: ನಗರದ ಇಂದಿರಾ ಸ್ಮಾರಕಭವನದಲ್ಲಿ (ಟೌನ್ ಹಾಲ್) ಇ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆಯಿತು. ಕಲಬುರಗಿ ಮಹಾನಗರಪಾಲಿಕೆ ಕರ,ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಅನುಪಮಾ ರಮೇಶ ಕಮಕನೂರ, ಸಾರ್ವಜನಿಕ ಹಾಗೂ ಆರೋಗ್ಯ,ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ ಅಯಜಖಾನ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಶೇಖ ಹುಸೇನ್ ಮತ್ತು ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪುತಲಿಬೇಗಂ ಅವರು ಆಯ್ಕೆಯಾದರು. ಆಯ್ಕೆಯಾದ ವಿವಿಧ ಸ್ಥಾಯಿಸಮಿತಿಯ ಅಧ್ಯಕ್ಷರನ್ನು ಮಹಾಪೌರರಾದ ವರ್ಷಾ ರಾಜೀವ ಜಾನೆ, ಉಪ ಮಹಾಪೌರರಾದ ತೃಪ್ತಿ ಎಸ್. ಲಾಖೆ, ಪಾಲಿಕೆ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್, ಕುಡಾ ಅಧ್ಯಕ್ಷ ಮಜರ್ ಅಲಂಖಾನ್, ಅರ್ಜುನ ಜಮಾದಾರ, ಲಿಂಗಣ್ಣ ಜಮಾದಾರ, ಅಂಬು ಡಿಗ್ಗಿ, ಪ್ರಕಾಶ ಕಮಕನೂರ, ಸಂದೇಶ ಕಮಕನೂರ, ಸುರೇಶ ಕಮಕನೂರ, ಶಿವಾನಂದ ಹೋನಗುಂಟಿ, ಈರಣ್ಣ ಪಾಟೀಲ ಝಳಕಿ, ಸೈಯದ್ ಅಹಮದ್, ಅಜಮಲ್ ಗೋಲಾ, ಖುಸ್ರೋ ಜಾಗೀರದಾರ, ಶಫೀಕ್ ಹುಂಡೇಕಾರ್ ಮೊದಲಾದವರು ಅಭಿನಂದಿಸಿದರು.