ಕೋಲಿ/ಕಬ್ಬಲಿಗ ಸಮಾಜದ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳಿಗೆ ರೂ೧.೨೦ ಕೋಟಿ ಅನುದಾನ ಬಿಡುಗಡೆ: ಡಾ.ಸಾಬಣ್ಣ ತಳವಾರ

ಕಲಬುರಗಿ: ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟಿನ ಅಡಿಯಲ್ಲಿ ನಡೆಯಲಿರುವ ಸ್ವಾಭಿಮಾನಿ ಶ್ರೀ ವಿಠ್ಠಲ್ ಹೇರೂರ ಮೆಟ್ರಿಕ್ ನಂತರದ ಉಚಿತ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಸಾಬಣ್ಣ ತಳವಾರ್ ಅವರು ಭೂಮಿ ಪೂಜೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕಾಗಿ ರೂ.೩೦ ಲಕ್ಷ ಅನುದಾನ ಮಂಜೂರು ಮಾಡಿರುವುದಾಗಿ ಘೋಷಿಸಿದರು. “ಕೋಲಿ/ಕಬ್ಬಲಿಗ ಸಮಾಜ ಕಲಬುರಗಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದುಳಿದ ಸ್ಥಿತಿಗತಿಗಳಲ್ಲಿದೆ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯವು ಕಳೆದ ಏಳು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಈಗಾಗಲೇ ಸಮಾಜದ ವಿವಿಧ ಕಾಮಗಾರಿಗಳಿಗೆ ರೂ.೧.೨೦ ಕೋಟಿ ಅನುದಾನ ನೀಡಿದ್ದೇನೆ,” ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಮುಕ್ಕಾ ಅವರು, “ಸುಮಾರು ರೂ.೫ ಕೋಟಿಗಳ ಅಂದಾಜಿನ ಈ ಕಟ್ಟಡ ಮುಂದಿನ ದಿನಗಳಲ್ಲಿ ರಾಜ್ಯದ ಕೋಲಿ/ಕಬ್ಬಲಿಗ ಸಮಾಜಕ್ಕೆ ಶಕ್ತಿ ಕೇಂದ್ರವಾಗಲಿದೆ” ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳಲ್ಲಿ ಶ್ಯಾಮ್ ಕುಮಾರ್, “ಈ ವಸತಿ ನಿಲಯದ ಸೌಲಭ್ಯದಿಂದ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ವಿವಿಧ ಹುದ್ದೆಗಳಲ್ಲಿ ಪ್ರಗತಿ ಸಾಧಿಸಿದ್ದಾರೆ” ಎಂದು ತಿಳಿಸಿದರು.
ವೇದಿಕೆಯಲ್ಲಿ ಗಿರಿಮಲ್ಲಪ್ಪ ಹರವಾಳ, ವೀರಣ್ಣ ಜಮಾದಾರ್, ಮಲ್ಲಿಕಾರ್ಜುನ ತಳಕೇರಿ, ಸುನಿಲ್ ಕಿನ್ನೂರ, ಚಂದ್ರಶೇಖರ ಕೊಟ್ರಗಸ್ತಿ, ಶರಣಬಸಪ್ಪ ದೊಡ್ಡಮನಿ, ಮಲ್ಲಪ್ಪ ಮನೆಗಾರ, ಯಲ್ಲಪ್ಪ ತಳವಾರ್, ಸಿದ್ದಣ್ಣ ಮುಕುರಂಬಿ, ವಿಜಯ್ ಕುಮಾರ್ ನಾಟಿಕರ್, ಡಾ. ರಾಮಕೃಷ್ಣ ಬಗ್ಗುರಿಗಿ, ಗೀತಾ ಸತೀಶಕುಮಾರ್, ಸೋಮರಾಯ ನಾಗಾವಿ, ನೀಲಕಂಠ ಜಮಾದಾರ, ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರ, ಸಂತೋಷ ತೋಟ್ನಳ್ಳಿ, ದಾದಾಸಾಹೇಬ್ ಹೋಸುರ, ಶಿವಶರಣಪ್ಪ ಜಮಾದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಲ್ಲಪ್ಪ ತಳವಾರ್ ನಿರೂಪಿಸಿದರು. ಮಲ್ಲಪ್ಪ ಮಾನೆಗರ್ ಸ್ವಾಗತಿಸಿದರು, ಸಿದ್ದಣ್ಣ ಮರಕುಂಬಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ವಿವರಗಳನ್ನು ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ದೊಡ್ಡಮನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!