ಕಲಬುರಗಿ: ನವರಾತ್ರಿ ಹಬ್ಬದ ನಿಮಿತ್ಯವಾಗಿ ಭಾವಸಾರ್ ಕ್ಷತ್ರಿಯ ಸಮಾಜ ವತಿಯಿಂದ ನಗರದ ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀಕಾಂತ್ ರಂಗದಾಳ ತಿಳಿಸಿದ್ದಾರೆ. ದಿನಾಂಕ ೨೫-೯-೨೦೨೫ ರಿಂದ ೩೦-೦೯-೨೦೨೫ ರವರೆಗೆ ಪ್ರತಿದಿನ ಬೆಳಿಗ್ಗೆ ೯ ಗಂಟೆಗೆ ಮತ್ತು ರಾತ್ರಿ ೮:೩೦ ಗಂಟೆಗೆ ದೇವಿ ಆರತಿ, ಅದೇರೀತಿಯಾಗಿ ಪ್ರತಿದಿನ ಸಾಯಂಕಾಲ ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಮಹಾ ಜನತೆ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು, ದಾಂಡಿಯಾದಲ್ಲಿ ಭಾಗವಹಿಸಬಹುದು ಎಂದು ರಂಗದಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂಗುಲಾಂಬಿಕದೇವಿ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮ : ರಂಗದಾಳ
